Publish Date: Tue, 21 Mar 2023 (16:15 IST)
Updated Date: Tue, 21 Mar 2023 (16:31 IST)
ಒಂದೆಡೆ 3ನೇ ಮಹಾಯುದ್ಧದ ಮಾತುಗಳು ಮೊಳಕೆಯೊಡೆದು ಜಗತ್ತಿನ ಮೂಲೆ ಮೂಲೆಯಲ್ಲೂ ಆತಂಕ ಆವರಿಸಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಎಲ್ಲಿ 3ನೇ ಮಹಾಯುದ್ಧವಾಗಿ ಬದಲಾಗುತ್ತದೋ ಎಂಬ ಭಯ ಆಧುನಿಕ ಜಗತ್ತನ್ನು ಕಾಡುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಭೇಟಿಗೂ ಮುನ್ನ ಮಾತನಾಡಿದ ಕ್ಸಿ ಜಿನ್‌ಪಿಂಗ್, ಉಕ್ರೇನ್ ಸಂಘರ್ಷದಿಂದ ಹೊರಬರಲು ತರ್ಕಬದ್ಧ ಮಾರ್ಗಕ್ಕಾಗಿ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಆದರೆ ಪರಿಹಾರವನ್ನು ತಲುಪುವುದು ಸುಲಭವಲ್ಲ ಎಂದು ಸಹ ಅವರು ಒಪ್ಪಿಕೊಂಡಿದ್ದಾರೆ.