Select Your Language

Notifications

webdunia
webdunia
webdunia
webdunia

ಸಾಲ ತೀರಿಸಲು ಪಾಕಿಸ್ತಾನಕ್ಕೆ ಚೀನಾ ನೆರವು

ಸಾಲ ತೀರಿಸಲು ಪಾಕಿಸ್ತಾನಕ್ಕೆ ಚೀನಾ ನೆರವು
ಬೀಜಿಂಗ್ , ಸೋಮವಾರ, 14 ಡಿಸೆಂಬರ್ 2020 (10:52 IST)
ಬೀಜಿಂಗ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ನೆರವು ನೀಡುತ್ತಿದೆ. ಭಾರತದ ವಿರುದ್ಧ ಗಡಿಯಲ್ಲಿ ಹುನ್ನಾರ ನಡೆಸಲು ಚೀನಾಗೆ ಪಾಕ್ ಸಹಾಯ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಪಾಕಿಸ್ತಾನದ ಸಾಲ ತೀರಿಸಲು ಚೀನಾ ನೆರವಾಗುತ್ತಿದೆ.


ಸೌದಿ ಅರೇಬಿಯಾದಿಂದ ಪಾಕ್ ಪಡೆದಿದ್ದ 2 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಚೀನಾ ಸಹಾಯ ಮಾಡಲಿದೆ. 2 ಬಿಲಿಯನ್ ಡಾಲರ್ ಪೈಕಿ 1.5 ಬಿಲಿಯನ್ ಡಾಲರ್ ಹಣವನ್ನು ಚೀನಾ ಪಾಕ್ ಗೆ ನೀಡಲಿದೆ. ಈ ಮೂಲಕ ಸಾಲದ ಕೂಪದಲ್ಲಿರುವ ಪಾಕಿಸ್ತಾನ ಸೌದಿ ರಾಷ್ಟ್ರಕ್ಕೆ 1 ಬಿಲಿಯನ್ ಡಾಲರ್ ನಷ್ಟು ಸಾಲ ಮರುಪಾವತಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಕೊಂದು ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿದ ಪತಿ ಕೊನೆಗೆ ಮಾಡಿದ್ದೇನು?