Select Your Language

Notifications

webdunia
webdunia
webdunia
webdunia

ಗಲ್ವಾನ್ ನಲ್ಲಿ ಬಂಡವಾಳ ಬಯಲಾಗುತ್ತದೆಂದು ಸೈನಿಕರ ಶವ ಸಂಸ್ಕಾರ ಮಾಡದಂತೆ ತಡೆದಿದ್ದ ಚೀನಾ

ಗಲ್ವಾನ್ ನಲ್ಲಿ ಬಂಡವಾಳ ಬಯಲಾಗುತ್ತದೆಂದು ಸೈನಿಕರ ಶವ ಸಂಸ್ಕಾರ ಮಾಡದಂತೆ ತಡೆದಿದ್ದ ಚೀನಾ
ನವದೆಹಲಿ , ಮಂಗಳವಾರ, 14 ಜುಲೈ 2020 (09:55 IST)
ನವದೆಹಲಿ: ಗಲ್ವಾನ್ ಘರ್ಷಣೆಯಲ್ಲಿ ಭಾರತವೇನೋ 20 ಜನ ಸೈನಿಕರು ಹುತಾತ್ಮರಾಗಿದ್ದರೆಂದು ಆಗಲೇ ಘೋಷಣೆ ಮಾಡಿತ್ತು. ಆದರೆ ಚೀನಾ ತನ್ನ ಬಂಡವಾಳ ಬಯಲಾಗಬಾರದೆಂದು ಮಾಡಿದ ನಾಟಕವನ್ನು ಅಮೆರಿಕಾ ಗುಪ್ತಚರ ವರದಿ ಬಹಿರಂಗ ಮಾಡಿದೆ.


ಚೀನಾ ಅಧಿಕೃತವಾಗಿ ತನ್ನ ಪಾಳಯದಲ್ಲಿ ಎಷ್ಟು ಸೈನಿಕರು ಸಾವನ್ನಪ್ಪಿದ್ದರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಭಾರತಕ್ಕಿಂತಲೂ ಹೆಚ್ಚು ಸಾವು-ನೋವು ಚೀನಾಕ್ಕಾಗಿದೆ ಎನ್ನಲಾಗಿತ್ತು.

ಈಗ ಅಮೆರಿಕಾ ಗುಪ್ತಚರ ವರದಿ ಇನ್ನೊಂದು ವಿಚಾರ ಬಹಿರಂಗಪಡಿಸಿದ್ದು, ಚೀನಾ ತನ್ನ ಎಷ್ಟು ಸೈನಿಕರು ಸಾವನ್ನಪ್ಪಿದ್ದರು ಎಂಬುದು ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಹುತಾತ್ಮ ಸೈನಿಕರ ಕುಟುಂಬದವರಿಗೆ ಅವರ ಮೃತದೇಹಗಳನ್ನು ಅಂತ್ಯ ಸಂಸ್ಕಾರ ಮಾಡದಂತೆ ಒತ್ತಡ ಹೇರಿತ್ತಂತೆ. ಅಂತ್ಯ ಸಂಸ್ಕಾರ ಮಾಡಿದರೆ ಎಲ್ಲಿ ತನ್ನ ಬಂಡವಾಳ ಜಗತ್ತಿನ ಮುಂದೆ ಬಯಲಾಗುತ್ತದೋ ಎಂಬ ದುರಾಲೋಚನೆಯಲ್ಲಿ ಚೀನಾ ಹೀಗೆ ಮಾಡಿತ್ತು ಎಂಬ ವಿಚಾರ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮ ಭಾರತೀಯನಲ್ಲ , ನೇಪಾಳಿ ಎಂದ ನೇಪಾಳ ಪ್ರಧಾನಿ