Select Your Language

Notifications

webdunia
webdunia
webdunia
webdunia

ಮನೆಗೆ ತೆರಳಲು ದಾರಿ ಕಾಣದ ನಾಯಿ ಮಾಡಿದ್ದೇನು ಗೊತ್ತಾ?

ಮನೆಗೆ ತೆರಳಲು ದಾರಿ ಕಾಣದ ನಾಯಿ ಮಾಡಿದ್ದೇನು ಗೊತ್ತಾ?
ನವದೆಹಲಿ , ಭಾನುವಾರ, 12 ಜುಲೈ 2020 (09:24 IST)
ನವದೆಹಲಿ: ಮನೆಗೆ ತೆರಳಲು ದಾರಿ ಕಾಣದ ನಾಯಿ ತಾನು ಯಾವತ್ತೂ ಹೋಗುತ್ತಿದ್ದ ಪಶು ವೈದ್ಯರ ಕ್ಲಿನಿಕ್ ಬಾಗಿಲು ತಟ್ಟಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.


ನಾಯಿಯೊಂದು ದಾರಿ ತಪ್ಪಿ ಮನೆಗೆ ಹೋಗಲು ದಿಕ್ಕು ತೋಚದೇ ತಾನು ಯಾವತ್ತೂ ಮಾಲಿಕನೊಂದಿಗೆ ತೆರಳುತ್ತಿದ್ದ ಪಶುವೈದ್ಯರ ಕ್ಲಿನಿಕ್ ಗೆ ಬಂದಿತ್ತು. ಬಾಗಿಲ ಬಳಿ ತುಂಬಾ ಹೊತ್ತು ನಿಂತು ಪಶುವೈದ್ಯರ ಬಳಿ ಬಾಗಿಲು ತೆರೆಯುವಂತೆ ಬೊಗಳುತ್ತಾ ಮನವಿ ಮಾಡುತ್ತಿತ್ತು.

ಆರಂಭದಲ್ಲಿ ಹಿಂಜರಿದ ಪಶು ವೈದ್ಯರು ಬಳಿಕ ಬಾಗಿಲು ತೆರೆದಾಗ ಅವರಿಗೆ ಇದು ಪರಿಚಯದ ನಾಯಿಯೇ ಎನ್ನುವುದು ಅರಿವಾಯಿತು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಗಡಿ ದಾಟಲು ಕಾಯುತ್ತಿರುವ 300 ಉಗ್ರರು!