Publish Date: Sun, 12 Jul 2020 (09:18 IST)
Updated Date: Sun, 12 Jul 2020 (09:20 IST)
ನವದೆಹಲಿ: ಭಾರತದಲ್ಲಿ ಶಾಂತಿ ಕದಡಲು ಸುಮಾರು 250 ರಿಂದ 300 ಉಗ್ರರು ಹೊಂಚು ಹಾಕಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಭಾರತದ ಗಡಿ ದಾಟಲು ಸುಮಾರು 300 ಉಗ್ರರು ಸಿದ್ಧರಾಗಿದ್ದು, ಶತ್ರುದೇಶದ ಲಾಂಚ್ ಪ್ಯಾಡ್ ನಲ್ಲಿ ಈ ಉಗ್ರರು ಒಳ ನುಸುಳಲು ಹುನ್ನಾರ ನಡೆಸಿದ್ದಾರೆ. ಪಾಕ್ ಪಾಳಯದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡುಬರುತ್ತಿದೆ ಎಂದು ನಮ್ಮ ಸೇನೆಗೆ ಮಾಹಿತಿ ಸಿಕ್ಕಿದೆ ಎಂದು ಮೇಜರ್ ಜನರಲ್ ವಿಜೇಂದ್ರ ವಾಟ್ಸ್ ಮಾಹಿತಿ ನೀಡಿದ್ದಾರೆ.