Select Your Language

Notifications

webdunia
webdunia
webdunia
webdunia

ಚೀನಾ ಸೇನೆಗೆ ಶುರುವಾಗಿದೆ ಹಸ್ತ ಮೈಥುನದ ತಲೆ ನೋವು..!

ಚೀನಾ ಸೇನೆಗೆ ಶುರುವಾಗಿದೆ ಹಸ್ತ ಮೈಥುನದ ತಲೆ ನೋವು..!
ಬೀಜಿಂಗ್ , ಶನಿವಾರ, 26 ಆಗಸ್ಟ್ 2017 (11:52 IST)
ದೊಕ್ಲಾಮ್ ವಿವಾದದಲ್ಲಿ ಭಾರತದ ವಿರುದ್ಧ ಯುದ್ಧೋನ್ಮಾದದಲ್ಲಿ ಬುಸುಗುಡುತ್ತಿರುವ ಚೀನಾ ಸೇನೆಯ ಹೊಸದೊಂದು ಸಮಸ್ಯೆ ಶುರುವಾಗಿದೆ. ಅದುವೇ ಹಸ್ತ ಮೈಥುನ.

ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಯುವ ಚೀನಿಯರನ್ನ ನೇಮಕಾತಿ ಶುರು ಮಾಡಿತ್ತು. ಆದರೆ, ಇದರಲ್ಲಿ ಶೇ. 56ರಷ್ಟು ಮಂದಿ ಅನುತ್ತೀರ್ಣರಾಗಿದ್ಧಾರೆ. ಇದಕ್ಕೆ ಕಾರಣ ಕಳಪೆ ಫಿಟ್ನೆಸ್. ಕಂಪ್ಯೂಟರ್ ಗೇಮ್`ಗಳಿಗೆ ದಾಸರಾಗಿರುವ ಚೀನೀ ಯುವಕರು ತಮ್ಮ ಕಡಿಮೆ ವ್ಯಾಯಾಮದಿಂದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಹಸ್ತಮೈಥುನ ಚಾಳಿ ಹಬ್ಬಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ನರದೌರ್ಬಲ್ಯ ಅನುಭವಿಸಿದ್ದಾರೆ.ಹೀಗಾಗಿ, ಸೇನೆಯ ಮೊದಲ ಹಂತದ ಪರೀಕ್ಷೆಗಳಲ್ಲೇ ವಿಫಲರಾಗುತ್ತಿದ್ಧಾರೆ.

ಅಧಿಕ ಸಮಯ ಕಂಪ್ಯೂಟರ್ ಮುಂದೆ ಕುಳಿತಿರುವುದು, ಕಡಿಮೆ ವ್ಯಾಯಾಮ, ಅಧಿಕ ಹಸ್ತ ಮೈಥುನ ಈ ಎಲ್ಲ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಹಸ್ತ ಮೈಥುನದಿಂದ ವೃಷಣದ ನರಗಳು ಸಾಮಾನ್ಯಕ್ಕಿಂತ ಹೆಚ್ಚು ಉಬ್ಬಿರುವುದರಿಂದ ದೈಹಿಕ ಸಾಮರ್ಥ್ಯ ಕುಗ್ಗಿದೆ.ಇದರ ಜೊತೆಗೆ ದೃಷ್ಟಿ ದೋಶಗಳೂ ಹೆಚ್ಚಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿದೇಶಕ್ಕೆ ತೆರಳಿದ ರಾಹುಲ್ ಗಾಂಧಿ