Select Your Language

Notifications

webdunia
webdunia
webdunia
webdunia

ಭೂತಾನ್ ಹೆಸರಲ್ಲಿ ಬೆಂಕಿ ಇಡಲು ಮುಂದಾದ ಚೀನಾ..!

ಭೂತಾನ್ ಹೆಸರಲ್ಲಿ ಬೆಂಕಿ ಇಡಲು ಮುಂದಾದ ಚೀನಾ..!
ಬೀಜಿಂಗ್ , ಬುಧವಾರ, 9 ಆಗಸ್ಟ್ 2017 (15:21 IST)
ಭೂತಾನ್ ಪರವಾಗಿ ಡೊಕ್ಲಾಮ್ ಪ್ರದೇಶದಲ್ಲಿ ಸೇನೆಯನ್ನ ನಿಯೋಜಿಸಿ ಚೀನಾ ಸೇನೆಯನ್ನ ಹಿಮ್ಮೆಟ್ಟಿಸಿದ ಭಾರತ ದೇಶಕ್ಕೆ ಆಘಾತವಾಗುವಂತಹ ಸುದ್ದಿ ಹೊರಬಿದ್ದಿದೆ. ಭಾರತ ಮತ್ತು ಚೀನಾ ಸೇನೆ ನಡುವೆ ಬಿಕ್ಕಟ್ಟು ಏರ್ಪಟ್ಟಿರುವ ದೊಕ್ಲಾಮ್ ಪ್ರದೇಶ ಚೀನಾ ಸೇರಿದ್ದು, ಎಂದು ಭೂತಾನ್ ಸರ್ಕಾರ ಸ್ಪಷ್ಟಪಡಿಸಿರುವುದಾಗಿ ಚೀನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾ ದೇಶದ ಗಡಿ ರಾಜತಾಂತ್ರಿಕ ಉನ್ನತ ಮಹಿಳಾ ಅಧಿಕಾರಿ ವಾಂಗ್ ವೆನ್ಲಿ, ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಏರ್ಪಟ್ಟಿರುವ ದೊಕ್ಲಾಮ್ ಪ್ರದೇಶ ನಮಗೆ ಸೇರಿದ್ದಲ್ಲ ಎಂದು ಭೂತಾನ್ ರಾಜತಾಂತ್ರಿಕ ಸಂದೇಶ ರವಾನಿಸಿದೆ ಎಂದು ಭಾರತದ ಮಾಧ್ಯಮ ನಿಯೋಗಕ್ಕೆ ತಿಳಿಸಿದ್ದಾರೆ. ಆದರೆ, ಆ ಮಹಿಳಾಧಿಕಾರಿ ಈ ಹೇಳಿಕೆಗೆ ಪುಷ್ಠಿ ನಿಡುವ ಯಾವುದೇ ದಾಖಲೆ ಕೊಟ್ಟಿಲ್ಲ.
ಜೂನ್ 16ರಂದು ಚೀನಾ ವಿರುದ್ಧ ಪ್ರತಿಭಟಿಸಿದ್ದ ಭೂತಾನ್ ದ್ವಿಪಕ್ಷೀಯ ಒಪ್ಪಂದವನ್ನ ಕಡೆಗಣಿಸಿ ದೊಕ್ಲಾಮ್`ನಲ್ಲಿ ಚೀನಾ ರಸ್ತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆಕ್ರೋಶ ಪಡಿಸಿ ಹೇಳಿಕೆ ಬಿಡುಗಡೆ ಮಾಡಿತ್ತು. ಇದೀಗ, ಭೂತಾನ್ ದೊಕ್ಲಾಮ್ ನನಗೆ ಸೇರಿದ ಪ್ರದೇಶವೇ ಅಲ್ಲವೆಂದು ಹೇಳಿದೆ ಎಂದು ಚೀನಾಧಿಕಾರಿ ಹೇಳಿದ್ದಾರೆ.

ಜೊತೆಗೆ ಚೀನಾ ನೆಲದಲ್ಲಿ ಭಾರತದ ಗಡಿ ಭದ್ರತಾ ಪಡೆ ನೆಲೆಯೂರಿರುವುದು ನಿಜಕ್ಕೂ ವಿಚಿತ್ರ ಎನಿಸುತ್ತಿದೆ ಎಂದು ಭೂತಾನ್ ತಿಳಿಸಿರುವುದಾಗಿ ಚೀನಾಧಿಕಾರಿ ಹೇಳಿದ್ದಾರೆ. ಆದರೆ, ಚೀನಾ ಈ ಬಗ್ಗೆ ಯಾವುದೇ ಸಾಕ್ಷ್ಯ ನಿಡದಿರುವುದು ಇದು ಆದೇಶದ ಕಪಟತನ ಎನ್ನುವುದರಲ್ಲಿ ಎರಡು ಮಾತಿಲ್ಲ. ಯುದ್ಧದ ಮಾತುಗಳನ್ನಾಡುತ್ಥಾ ಭಾರತವನ್ನ ಬೆದರಿಸಲು ಯತ್ನಿಸುತ್ತಿದ್ದ ಚೀನಾ ಈಗ ಹೊಸ ಅಸ್ತ್ರ ಹೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಐಟಿ ಸಮನ್ಸ್ ಜಾರಿ