Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಬಗ್ಗೆ ಚೀನಾ ಅಧ್ಯಕ್ಷರಿಗೆ ಭಯವಿದೆಯಂತೆ!

ಪ್ರಧಾನಿ ಮೋದಿ ಬಗ್ಗೆ ಚೀನಾ ಅಧ್ಯಕ್ಷರಿಗೆ ಭಯವಿದೆಯಂತೆ!
NewDelhi , ಮಂಗಳವಾರ, 8 ಆಗಸ್ಟ್ 2017 (09:21 IST)
ನವದೆಹಲಿ: ಪ್ರಧಾನಿ ಮೋದಿ ಭಾರತದ ಹಿತಕ್ಕಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಲ್ಲ ಚಾಣಕ್ಷ್ಯ ಎಂಬ ಭಯ ಚೀನಾ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಗೆ  ಇದೆಯಂತೆ. ಹಾಗಂತ ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 
ಭಾರತ ಇತ್ತೀಚೆಗೆ ಜಪಾನ್ ಮತ್ತು ಅಮೆರಿಕಾ ಜತೆ ಹೆಚ್ಚು ಸ್ನೇಹ ಬೆಳೆಸುವ ಮೂಲಕ ಚೀನಾಕ್ಕೆ ಪ್ರತಿಸ್ಪರ್ಧಿಯಾಗುತ್ತಿರುವುದು ಚೀನಾ ಅಧ್ಯಕ್ಷರ ನಿದ್ದೆಗೆಡಿಸಿದೆ ಎಂದು ಅಮೆರಿಕಾ ರಾಜನೀತಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಭಾರತದ ಸುರಕ್ಷತೆಗಾಗಿ ಯಾವ ಹಂತಕ್ಕೆ ಬೇಕಾದರೂ ನಿಲ್ಲಬಲ್ಲ ಸಮರ್ಥ ಎಂಬುದನ್ನು ಜಿನ್ ಪಿಂಗ್ ಅರ್ಥಮಾಡಿಕೊಂಡಿದ್ದಾರಂತೆ. ಇದಕ್ಕೆ ಇತ್ತೀಚೆಗೆ ಚೀನಾದ ಬೆಳವಣಿಗೆಗೆ ವಿರೋಧಿಯಾಗಿ ಭಾರತ ನಡೆಸುತ್ತಿರುವ ವಿದೇಶಾಂಗ ನೀತಿಗಳು, ಸಂಬಂಧಗಳು ಮತ್ತು ಕ್ರಮಗಳೇ ಸಾಕ್ಷಿ ಎಂದು ಅವರು ಮನಗಂಡಿದ್ದಾರಂತೆ.

ಅಮೆರಿಕಾ, ಜಪಾನ್, ಆಸ್ಟ್ರೇಲಿಯಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜತೆ ಕೈ ಜೋಡಿಸಿ ಭಾರತ ಮುಂದಿನ ದಿನಗಳಲ್ಲಿ ಚೀನಾಕ್ಕೆ ಮತ್ತಷ್ಟು ಸವಾಲು ತರಲಿದೆ ಎಂಬ ಆತಂಕ ಚೀನಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ನಿಮಗಿದು ಗೊತ್ತಾ? ಚಕ್ಕೆ ಮಧುಮೇಹವನ್ನು ನಿಯಂತ್ರಿಸುತ್ತದೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ