ಚೀನಾಗೆ ಅಜಿತ್ ದೋವಲ್ ಶಾಕ್ ಕೊಟ್ಟಿದ್ದು ಹೇಗೆ ಗೊತ್ತಾ?

ಮಂಗಳವಾರ, 7 ಜುಲೈ 2020 (09:02 IST)
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತೆ ತಮ್ಮ ಜಾದೂ ಮಾಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಗಳ ಪ್ರಮುಖ ರೂವಾರಿ ಅಜಿತ್ ದೋವಲ್ ಈ ಬಾರಿ ಚೀನಾ ಸೇನೆ ಗಲ್ವಾನ್ ಗಡಿಯಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ.


ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಜತೆ ವಿಡಿಯೋ ಕರೆ ಮಾಡಿ ಮಾತನಾಡಿದ ಅಜಿತ್ ದೋವಲ್ ಗಡಿಯ ಸಮಸ್ಯೆಗಳ ಬಗ್ಗೆ, ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಚೀನಾ ವಿದೇಶಾಂಗ ಸಚಿವರು ಗಡಿಯಿಂದ ಹಿಂದೆ ಸರಿಯಲು ಸಮ್ಮತಿಸಿದರು ಎನ್ನಲಾಗಿದೆ. ಈ ಹಿಂದೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದಾಗಲೂ ಅಜಿತ್ ದೋವಲ್ ನೇತೃತ್ವದ ವಿಶೇಷ ಪಡೆ ಚೀನಾಕ್ಕೆ ಖಡಕ್ ವಾರ್ನಿಂಗ್ ನೀಡಿತ್ತು. ಇದೀಗ ಮತ್ತೆ ದೋವಲ್ ಮ್ಯಾಜಿಕ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುತ್ತಿ ಬಳಸಿ ಅರುಚಾಲ ಗಡಿ ವಿವಾದ ಕೆದಕುತ್ತಿರುವ ಚೀನಾ