Select Your Language

Notifications

webdunia
webdunia
webdunia
webdunia

ಗಾಳಿಯಿಂದಲೂ ಹರಡುತ್ತಿದೆ ಕೊರೋನಾ: ವಿಜ್ಞಾನಿಗಳಿಂದ ಪತ್ತೆ

ಗಾಳಿಯಿಂದಲೂ ಹರಡುತ್ತಿದೆ ಕೊರೋನಾ: ವಿಜ್ಞಾನಿಗಳಿಂದ ಪತ್ತೆ
ನವದೆಹಲಿ , ಸೋಮವಾರ, 6 ಜುಲೈ 2020 (10:24 IST)
ನವದೆಹಲಿ: ಇದುವರೆಗೆ ಪರಸ್ಪರ ಸಂಪರ್ಕದಿಂದ ಮಾತ್ರ ಕೊರೋನಾ ಹರಡುತ್ತದೆ ಎಂದು ನಂಬಲಾಗಿತ್ತು. ಆದರೆ ಈಗ ಗಾಳಿಯ ಮೂಲಕವೂ ಕೊರೋನಾ ಹರಡುತ್ತಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.


ಗಾಳಿಯಿಂದಲೂ ಕೊರೋನಾ ವೈರಾಣು ಇನ್ನೊಬ್ಬರಿಗೆ ಹರಡಬಹುದು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದು, ವಿಶ್ವ ಸಂಸ್ಥೆಯ ಆರೋಗ್ಯ ಘಟಕ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಸುಮಾರು 32 ದೇಶಗಳ 239 ಕ್ಕೂ ಅಧಿಕ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿ ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ಜಾರಿಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಗುಡ್ಡ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ