ಕಠ್ಮಂಡು: ಭಾರತ ವಿರೋಧಿ ನೀತಿಯಿಂದಾಗಿ ಸ್ವಪಕ್ಷೀಯರಿಂದಲೇ ಕೆಂಗಣ್ಣಿಗೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆಪಿ ಒಲಿ ಹಣೆಬರಹ ಇಂದು ನಿರ್ಧಾರವಾಗಲಿದೆ.
ನೇಪಾಳದ ಕಮ್ಯುನಿಷ್ಟ್ ಪಕ್ಷ ಇಂದು ಕೆಪಿ ಒಲಿ ಪದಚ್ಯುತಿ ಬಗ್ಗೆ ನಿರ್ಧರಿಸಲಿದೆ. ಈಗಾಗಲೇ ಬಂಡಾಯವೆದ್ದಿರುವ ಆಡಳಿತಾರೂಢ ಪಕ್ಷದ ಸಂಸದರ ಪೈಕಿ 30 ರಿಂದ 40 ಮಂದಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ಪ್ರಚಂಡ ನೇತೃತ್ವದಲ್ಲಿ ಆಡಳಿತಾರೂಢ ಪಕ್ಷದ ನಾಯಕರು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ಒತ್ತಡದ ನಡುವೆಯೂ ರಾಜೀನಾಮೆ ನೀಡದ ಕೆಪಿ ಒಲಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲು ಪಕ್ಷದ ನಾಯಕರೇ ಮುಂದಾಗಿದ್ದಾರೆ.