Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವಕ್ಕೆ ಬಾಂಬ್ ಬೆದರಿಕೆ ?

ಅಹಮದಾಬಾದ್
ಅಹಮದಾಬಾದ್ , ಗುರುವಾರ, 26 ಜನವರಿ 2023 (12:18 IST)
ಅಹಮದಾಬಾದ್ : ಗಣರಾಜ್ಯೋತ್ಸವದಂದು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಹಮದಾಬಾದ್ ಮತ್ತು ಮತ್ತಿಬ್ಬರು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಗೀತಾ ಮಂದಿರ ಬಸ್ ನಿಲ್ದಾಣ ಮತ್ತು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬೆದರಿಕೆ ಪತ್ರ ಬಂದ ತಕ್ಷಣ ಅಹಮದಾಬಾದ್ ಕ್ರೈಂ ಬ್ರಾಂಚ್ ಕಾರ್ಯಾಚರಣೆಗೆ ಇಳಿದಿತ್ತು.

ಬೆದರಿಕೆ ಪತ್ರವನ್ನು ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿಸಲಾಗಿತ್ತು. ಪತ್ರದಲ್ಲಿ ಕೆಲವು ಸಂಖ್ಯೆಗಳನ್ನು ಸಹ ಉಲ್ಲೇಖಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಹುದ್ದೆ ಉಳಿಸಿಕೊಳ್ಳಲು ಮಗುವನ್ನು ಕಾಲುವೆಗೆ ಎಸೆದ ದಂಪತಿ!