Select Your Language

Notifications

webdunia
webdunia
webdunia
webdunia

ಈ ಮಹಿಳೆ ಆಹಾರದ ಬದಲು ಬರೀ ಗಾಳಿ ಕುಡಿದುಕೊಂಡು ಬದುಕುತ್ತಿದ್ದಾಳಂತೆ

ಈ ಮಹಿಳೆ ಆಹಾರದ ಬದಲು ಬರೀ ಗಾಳಿ ಕುಡಿದುಕೊಂಡು ಬದುಕುತ್ತಿದ್ದಾಳಂತೆ
ಮಿನ್ನೇಸೋಟ , ಗುರುವಾರ, 4 ಜುಲೈ 2019 (09:31 IST)
ಮಿನ್ನೇಸೋಟ : ಪ್ರತಿಯೊಬ್ಬರಿಗೂ ಬದುಕಲು ಆಹಾರ ತುಂಬಾ ಮುಖ್ಯ. ಆದರೆ  ಮಿನ್ನೇಸೋಟದ ಮಿನ್ನಿಯಾಪೋಲಿಸ್ ನ ಮಹಿಳೆಯೊಬ್ಬಳು “ಪ್ರಾನಿಕ್” ಜೀವನಶೈಲಿಗಾಗಿ ಆಹಾರವನ್ನು ತ್ಯಜಿಸಿ ಬರೀ ಗಾಳಿಯನ್ನು ಕುಡಿದುಕೊಂಡು ಬದುಕುತ್ತಿದ್ದಾಳಂತೆ.




ಈ ಮಹಿಳೆಯ ಹೆಸರು ಆಡ್ರಾ ಬಿಯರ್ ಎಂದು ಗುರುತಿಸಲಾಗಿದ್ದು, ಈಕೆಗೆ ಬಾಲ್ಯದಿಂದಲೂ ಆರೋಗ್ಯದ ಬಗ್ಗೆ ಹಾಗೂ ವ್ಯಾಯಾಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾಳಂತೆ. “ಪ್ರಾನಿಕ್” ಜೀವನಶೈಲಿಗೆ ಹೊಂದಿಕೊಳ‍್ಳುವ ಮೊದಲು ಆಡ್ರಾ ಸಸ್ಯಹಾರಿಯಾಗಿದ್ದಳಂತೆ. ಆದರೆ “ಪ್ರಾನಿಕ್” ಜೀವನಶೈಲಿ ಜನರ ಜೀವನವನ್ನು ಹೇಗೆ ಬದಲಾಯಿಸಿತು ಎಂಬುದರ ಕುರಿತು ಸಂಶೋಧನೆ ಮಾಡಲು ಮತ್ತು ಓದಲು ಶುರುಮಾಡಿದ ನಂತರ ಅದನ್ನು ಒಗ್ಗೂಡಿಸಿಕೊಳ್ಳಲು ಪ್ರಯತ್ನಿಸಿದ್ದಾಳಂತೆ.


ಆಕೆ ಮೊದಲು 5 ದಿನಗಳವರೆ ಕೇವಲ 40 ನಿಮಿಷಗಳ ಕಾಲ ಉಸಿರಾಟದ ಕೆಲಸವನ್ನು ಅಭ್ಯಾಸ ಮಾಡಿದಾಗ ಹಸಿವೇ ಆಗಲಿಲ್ಲವಂತೆ. 97 ದಿನಗಳ ಕಾಲ ನಡೆಸಿದ ಉಪವಾಸದ ಸಮಯದಲ್ಲಿ ಅವಳು ಕೇವಲ ಚಹಾ, ಜ್ಯೂಸ್ ಮಾತ್ರ ಸೇವಿಸಿದ್ದಾಳಂತೆ. ಆದರೆ ಇನ್ನುಮುಂದೆ ತಾನು ಬದುಕಲು ಆಹಾರದ ಅಗತ್ಯವಿಲ್ಲ. ಇದರಿಂದ ನಾನು ಹೆಚ್ಚು ಶಕ್ತಿಯನ್ನು ಹೊಂದಿದ್ದೇನೆ  ಎಂದು  ಹೇಳುತ್ತಿದ್ದಾಳೆ ಆಡ್ರಾ. 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗಾಗಿ ಉತ್ಪನ್ನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಪತಂಜಲಿ ಸಂಸ್ಥೆ