Select Your Language

Notifications

webdunia
webdunia
webdunia
webdunia

ವಯಸ್ಸು 40 ದಾಟಿದ ನಂತರವೂ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾ?

ವಯಸ್ಸು 40 ದಾಟಿದ ನಂತರವೂ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾ?
ಬೆಂಗಳೂರು , ಶನಿವಾರ, 20 ಏಪ್ರಿಲ್ 2019 (12:19 IST)
ಬೆಂಗಳೂರು : ವಯಸ್ಸು 40 ದಾಟಿದ ನಂತರ ಕೆಲಸದ ಒತ್ತಡ, ಅನಾರೋಗ್ಯದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಅಂತವರು ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಆಸಕ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು.


* ಬೀಟ್‌ರೂಟ್‌ ಪುರುಷರಲ್ಲಿ ಲೈಂಗಿಕ ಕಾರ್ಯಕ್ಷ ಮತೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.


* ಲೈಂಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.


* ಬ್ರಕೋಲಿ ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್‌ ಮಟ್ಟವನ್ನು ಹೆಚ್ಚಿಸುತ್ತದೆ.


* ಮೆಂತ್ಯೆ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಸರಾಗಗೊಳಿಸುವ ಸಾಮರ್ಥ್ಯ‌ವನ್ನು ಹೊಂದಿದೆ. ಅಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಆಹಾರದ ಮೂಲಕ ಸೇವಿಸಬಹುದು.


* ದಾಳಿಂಬೆ ಟೆಸ್ಟೋಸ್ಟೆರಾನ್‌ ಹಾರ್ಮೋನ್‌ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೂಡನ್ನು ಉತ್ತೇಜಿಸುವುದರ ಜತೆ ರಕ್ತ ಸಂಚಾರ ಸರಾಗವಾಗುವಂತೆ ಮಾಡುತ್ತದೆ.


* ಕಲ್ಲಂಗಡಿ 40 ವರ್ಷದ ನಂತರ ಪುರುಷರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸೌಂದರ್ಯ ವೃದ್ಧಿಸಲು ಈ ಧಾನ್ಯದ ಮೊಳಕೆಯಿಂದ ಮಾಡಿದ ತೈಲವನ್ನು ಬಳಸಿ