Select Your Language

Notifications

webdunia
webdunia
webdunia
webdunia

ಗ್ರಾಹಕರಿಗಾಗಿ ಉತ್ಪನ್ನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಪತಂಜಲಿ ಸಂಸ್ಥೆ

ನವದೆಹಲಿ
ನವದೆಹಲಿ , ಗುರುವಾರ, 4 ಜುಲೈ 2019 (09:19 IST)
ನವದೆಹಲಿ : ಯೋಗಗುರು ಬಾಬಾ ರಾಮದೇವ್ ಅವರ  ಪತಂಜಲಿ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಇದೇ ಮೊದಲ ಬಾರಿಗೆ ಉತ್ಪನ್ನಗಳ ಬೆಲೆ ಇಳಿಕೆ ಮಾಡುವುದರ ಜೊತೆಗೆ ಬಂಪರ್ ಆಫರ್ ಗಳನ್ನು ನೀಡುತ್ತಿದೆ.




ವರದಿಗಳ ಪ್ರಕಾರ, ಪತಂಜಲಿ ಉತ್ಪನ್ನಗಳಲ್ಲಿ ಮೂರನ್ನು ಖರೀದಿ ಮಾಡಿದ್ರೆ ಮೂರು ಉಚಿತ ಹಾಗೂ ಕೆಲ ವಸ್ತುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಜ್ಯೂಸ್, ಹಿಟ್ಟು, ಎಣ್ಣೆ, ಓಟ್ಸ್ ಮತ್ತು ಸಿದ್ಧ ಆಹಾರಗಳಿಗೆ ಕಂಪನಿ ರಿಯಾಯಿತಿ ನೀಡುತ್ತಿದ್ದರೆ, ಶಾಂಪೂ, ಫೇಸ್‌ವಾಶ್ ನಂತಹ ಸೌಂದರ್ಯ ವರ್ಧಕಗಳಿಗೆ ಕಾಂಬೋ ಆಫರ್ ನೀಡುತ್ತಿದೆ.


ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಪತಂಜಲಿಯ ಮಾರಾಟ ಕುಸಿಯುತ್ತಿದೆ. ಇದು ಹಣಕಾಸು ವರ್ಷ 2017 ಕ್ಕೆ ಹೋಲಿಸಿದರೆ ಹಣಕಾಸು ವರ್ಷ 2018 ರಲ್ಲಿ ಆದಾಯದಲ್ಲಿ 10% ಕುಸಿತವನ್ನು ಕಂಡಿದೆ. ಗ್ರಾಮೀಣ ಭಾಗದ ಮಂದಗತಿಯ ಬೇಡಿಕೆ ಕಾರಣದಿಂದಾಗಿ ಮಾರಾಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಕಂಪೆನಿ ಹೊರಬರುವುದಾಗಿ ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮಹತ್ವದ ನಿರ್ಧಾರ: 600 ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ