Publish Date: Sat, 04 Mar 2023 (11:22 IST)
Updated Date: Sat, 04 Mar 2023 (11:24 IST)
ಕ್ಯಾನ್ಬೆರಾ : ಹಿಂದೂ ದೇವಾಲಯದಲ್ಲಿ ಮತ್ತೆ ಭಾರತ ಹಾಗೂ ಮೋದಿ ವಿರೋಧಿ ಬರಹಗಳನ್ನು ಗೀಚಿ ವಿರೂಪಗೊಳಿಸಿರುವ ಘಟನೆ ಮತ್ತೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ. ಇದು 2 ತಿಂಗಳಲ್ಲಿ ನಡೆದಿರುವ 4ನೇ ಘಟನೆಯಾಗಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ನ ದಕ್ಷಿಣ ಭಾದಲ್ಲಿನ ಬರ್ಬ್ಯಾಂಕ್ ಉಪನಗರದಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ದೇವಾಲಯಕ್ಕೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ದೇವಾಲಯದ ಅರ್ಚಕರು ಹಾಗೂ ಭಕ್ತರು ಶನಿವಾರ ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಗೋಡೆ ಮೇಲೆ ದ್ವೇಷ ಬರಹಗಳನ್ನು ಗೀಚಿ ವಿರೂಪಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು, 7 ದಿನಗಳಲ್ಲಿ ನಡೆದಿರುವ 2ನೇ ಘಟನೆ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ತಿಳಿಸಿದ್ದಾರೆ.