ಲಂಡನ್ : 2 ವರ್ಷಗಳ ನಂತರ ಸೋಫಾದಲ್ಲಿ ಮಹಿಳೆ ಅಸ್ಥಿಪಂಜರ ಪತ್ತೆಯಾಗಿರುವ ವಿಲಕ್ಷಣ ಘಟನೆ ಯುಕೆಯಲ್ಲಿ ನಡೆದಿದೆ.
58 ವರ್ಷದ ಶೀಲಾ ಸೆಲಿಯೋನೆ ಅವರ ಅಸ್ಥಿಪಂಜರದ ಅವಶೇಷಗಳು ಪೆಕ್ಹ್ಯಾಮ್ನಲ್ಲಿರುವ ಫ್ಲಾಟ್ವೊಂದರಲ್ಲಿ ಪತ್ತೆಯಾಗಿದೆ. ಸೆಲಿಯೋನೆ ಅವರ ಫ್ಲಾಟ್ನ ಲಿವಿಂಗ್ ರೂಮ್ನಲ್ಲಿದ್ದ ಸೋಫಾದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಇದಕ್ಕೆ ಕಾರಣವೇನು? ಏನಾಯಿತು? ಎಂಬುದರ ಬಗ್ಗೆ ನಮಗೆ ಸರಿಯಾಗಿ ತಿಳಿದಿಲ್ಲ ಎಂದು ಹೌಸಿಂಗ್ ಸೊಸೈಟಿ ಕ್ಷಮೆಯಾಚಿಸಿದೆ. ಸೆಲಿಯೋನೆ ಸಾವಿನ ಪ್ರಕರಣ ಕುರಿತು ವಿಚಾರಣೆ ನಡೆಸಲಾಯಿತು.
ಮರಣೋತ್ತರ ವರದಿ ಪ್ರಕಾರ, ಸೆಲಿಯೋನೆ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರ ಸಾವಿನ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.