Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢ

ನ್ಯೂಯಾರ್ಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢ
ವಾಷಿಂಗ್ಟನ್ , ಶುಕ್ರವಾರ, 22 ಜುಲೈ 2022 (12:30 IST)
ವಾಷಿಂಗ್ಟನ್ : ಸುಮಾರು ಒಂದು ದಶಕದ ನಂತರ ಅಮೆರಿಕದಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢಪಟ್ಟಿದೆ.

ನ್ಯೂಯಾರ್ಕ್ನ ರಾಕ್ಲ್ಯಾಂಡ್ ಕೌಂಟಿಯಲ್ಲಿ ಪೋಲಿಯೊ ಪ್ರಕರಣ ವರದಿಯಾಗಿದೆ ಎಂದು ಸ್ಥಳೀಯ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳು ಘೋಷಿಸಿದ್ದಾರೆ.

ಜೂನ್ನಲ್ಲಿ 20 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪೋಲಿಯೊ ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪೋಲಿಯೊ ಸೋಂಕಿಗೆ ಒಳಗಾದವರಲ್ಲಿ ಶೇ.95 ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ ಅವರು ಇನ್ನೂ ವೈರಸ್ ಅನ್ನು ಹರಡಬಹುದು ಎಂದು ಇಲಾಖೆ ತಿಳಿಸಿದೆ. 

ಕೌಂಟಿ ಹೆಲ್ತ್ ಕಮಿಷನರ್ ಡಾ. ಪೆಟ್ರಿಸಿಯಾ ಷ್ನಾಬೆಲ್ ರಪ್ಪರ್ಟ್, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕೌಂಟಿ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ನ್ಯೂಯಾರ್ಕ್ ರಾಜ್ಯ ಆರೋಗ್ಯ ಇಲಾಖೆ ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ : ಮೋದಿ ಕರೆ