Select Your Language

Notifications

webdunia
webdunia
webdunia
webdunia

ಉಗ್ರ ಸಂಘಟನೆಗೆ ಸೇರಿದ ಬಾಲಕ ಮರಳಿ ತಾಯಿ ಮಡಿಲಿಗೆ ಸೇರಿದ

ಉಗ್ರ ಸಂಘಟನೆಗೆ ಸೇರಿದ ಬಾಲಕ ಮರಳಿ ತಾಯಿ ಮಡಿಲಿಗೆ ಸೇರಿದ
ಶ್ರೀನಗರ , ಶನಿವಾರ, 3 ಮಾರ್ಚ್ 2018 (07:44 IST)
ಶ್ರೀನಗರ : ಉಗ್ರ ಸಂಘಟನೆ ಸೇರಿದ್ದ ಬಾಲಕನೊಬ್ಬ ತನ್ನ ತಾಯಿಯ ಮನವಿಗೆ ಕರಗಿ ಸಂಘಟನೆ ತೊರೆದು ಮನೆಗೆ ಮರಳಿ ಬಂದಿದ್ದಾನೆ.


‘ಅಳುವ ತಾಯಿಯ ಮನವಿಗೆ ಕರಗಿದ ಈ ಹುಡುಗ ಹಿಂಸಾ ಮಾರ್ಗವನ್ನು ತೊರೆದು ಮನೆಗೆ ವಾಪಾಸ್ ಬಂದಿದ್ದಾನೆ.’ ಎಂದು ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಟ್ವೀಟ್ ಮಾಡಿದ್ದಾರೆ.


ಈ ಹುಡುಗನ ಭದ್ರತೆ ದೃಷ್ಟಿಯಿಂದ ಆತನ ವಿವರಗಳನ್ನು ಗೋಪ್ಯವಾಗಿಡಲಾಗಿದೆ. ‘ಯುವಕರು ಉಗ್ರ ಸಂಘಟನೆ ಸೇರುವುದನ್ನು ತಡೆಯುವ ಸಲುವಾಗಿ ಅವರು ಕ್ರಿಯಾಶೀಲರಾಗಿರುವಂತೆ ಮಾಡಲು ಕ್ರಿಕೆಟ್ ಪಂದ್ಯಾವಳಿಗಳಂಥ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲಿ ಶೂಟೌಟ್ ಪ್ರಕರಣ; ಇಬ್ಬರು ಸಾವು