Select Your Language

Notifications

webdunia
webdunia
webdunia
webdunia

30 ತಾಸುಗಳು ಕಾರ್ಯಾಚರಣೆ, ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

30 ತಾಸುಗಳು ಕಾರ್ಯಾಚರಣೆ, ಇಬ್ಬರು ಎಲ್ ಇಟಿ ಉಗ್ರರ ಹತ್ಯೆ
ಶ್ರೀನಗರ , ಬುಧವಾರ, 14 ಫೆಬ್ರವರಿ 2018 (08:06 IST)
ಶ್ರೀನಗರ: ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಶಿಬಿರದ ಬಳಿಯ ಕಟ್ಟಡದಲ್ಲಿ ಅಡಗಿದ್ದ ಇಬ್ಬರು ಲಷ್ಕರ್‌ ಎ ತಯ್ಯಿಬಾ (ಎಲ್‌ಇಟಿ) ಉಗ್ರರನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಲ್ಲುವುದರೊಂದಿಗೆ 30 ತಾಸುಗಳ ಕಾರ್ಯಾಚರಣೆ ಅಂತ್ಯಗೊಂಡಿದೆ.


ವಿಶೇಷ ಪಡೆ ಕಾರ್ಯಾಚರಣೆ: ಮಂಗಳವಾರ ರಂಗಕ್ಕಿಳಿದ ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆಯ 'ವಿಶೇಷ ಕಾರ್ಯಾಚರಣೆ ಪಡೆ' (ಎಸ್‌ಒಜಿ) ಮತ್ತು ಸಿಆರ್‌ಪಿಎಫ್‌ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರೂ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.


ಒಬ್ಬ ಉಗ್ರನನ್ನು ಆತ ಅಡಗಿದ್ದ ಕಟ್ಟಡದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಪಕ್ಕದ ಕಟ್ಟಡಕ್ಕೆ ಪಾರಾಗುವ ಯತ್ನದಲ್ಲಿದ್ದಾಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.


ಉಗ್ರರನ್ನು ಕೊಲ್ಲಲು ನಡೆದ ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್‌ ಯೋಧರೊಬ್ಬರು ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ಉಜ್ವಲಾ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್