Publish Date: Tue, 13 Feb 2018 (11:13 IST)
Updated Date: Tue, 13 Feb 2018 (11:23 IST)
ಚಿಕ್ಕಮಗಳೂರು: ಅವಲಕ್ಕಿಗಂಟಲಲ್ಲಿ ಸಿಲುಕಿ 3 ವರ್ಷದ ಮಗುವೊಂದು ಮೃತಪಟ್ಟಿದೆ. ಮೂಗ್ತಿಹಳ್ಳಿ ಸಮೀಪದ ಶಿರಗುಂದ ನಿವಾಸಿ ದುರ್ಗಾಪ್ರಸಾದ್ ಅವರ ಪುತ್ರ ಅನೀಶ್ ಮೃತಪಟ್ಟ ಬಾಲಕ.
ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿದ್ದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಉಸಿರುಗಟ್ಟಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ಮಾಡಿದ್ದರು. ಆದರೆ ಮಾರ್ಗದಲ್ಲೇ ಮಗು ಮೃತಪಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ