Select Your Language

Notifications

webdunia
webdunia
webdunia
webdunia

ವಿಶ್ವವನ್ನೇ ಸುತ್ತಿ ಬಂದ 21 ವರ್ಷದ ಯುವತಿ

ವಿಶ್ವವನ್ನೇ ಸುತ್ತಿ ಬಂದ 21 ವರ್ಷದ ಯುವತಿ
ಬೆಂಗಳೂರು , ಶುಕ್ರವಾರ, 7 ಜೂನ್ 2019 (19:25 IST)
21 ವರ್ಷ ವಯಸ್ಸಿನ ಲೆಕ್ಸಿ ಅಲ್ಫೋರ್ಡ್ ಮೇ 31 ರಂದು ಉತ್ತರ ಕೊರಿಯಾ ದೇಶವನ್ನು ಪ್ರವೇಶಿಸಿದಾಗ ವಿಶ್ವವನ್ನೇ ಸುತ್ತಿ ಬಂದ ದಾಖಲೆಯ ಇತಿಹಾಸದಲ್ಲಿ ಅತ್ಯಂತ ಕಿರಿಯ ಏಕೈಕ ಯುವತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಶ್ವದ ಎಲ್ಲಾ ದೇಶಗಳನ್ನು ಸುತ್ತಿ ಬಂದ ದಾಖಲೆಯನ್ನು ಹೊಂದಿರುವ ಇಂಗ್ಲೆಂಡ್ ಮೂಲದ 24 ವರ್ಷ ವಯಸ್ಸಿನ  ಜೇಮ್ಸ್ ಅಸ್ಕ್ವಿತ್ ಅವರ ದಾಖಲೆಯನ್ನು  ಲೆಕ್ಸಿ ಅಲ್ಫೋರ್ಡ್ ಉಡಿಸ್‌ಗೊಳಿಸಿದ್ದಾರೆ. ಗಿನ್ನಿಸ್ ವೆಬ್‌ಸೈಟ್ ದಾಖಲೆಯ ಪ್ರಕಾರ ಜೇಮ್ಸ್ ವಿಶ್ವವನ್ನು ಸುತ್ತಿ ಬಂದಾಗ ಆತನಿಗೆ 24 ವರ್ಷ ಮತ್ತು 192 ದಿನಗಳಾಗಿದ್ದವು.ಆದರೆ, ಲೆಕ್ಸಿ ತಮ್ಮ 21ನೇ ವಯಸ್ಸಿನಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ. 
 
ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ ಎಲ್ಲಾ ಅಧಿಕೃತ ದೇಶಗಳಿಗೆ ಭೇಟಿ ನೀಡಿರುವುದು ಹಲವು ವರ್ಷಗಳ ಪಟ್ಟ ಶ್ರಮಕ್ಕೆ ಫಲ ದೊರೆತಂತಾಗಿದೆ. ನನಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದಗಳು. ನನ್ನ ವಿಶ್ವ ಪ್ರಯಾಣ ಅಂತ್ಯಗೊಳಿಸುತ್ತಿದ್ದೇನೆ. ಹೊಸ ಜೀವನವನ್ನು ಆರಂಭಿಸುತ್ತಿದ್ದೇನೆ ಎಂದು ಲೆಕ್ಸಿ ಅಲ್ಫೋರ್ಡ್ ಪೋಸ್ಟ್ ಮಾಡಿದ್ದಾರೆ. 
 
ಫೋರ್ಬ್ಸ್ ವರದಿಯ ಪ್ರಕಾರ, ಅಲ್ಫೋರ್ಡ್ ಕುಟುಂಬ ಕ್ಯಾಲಿಫೋರ್ನಿಯಾದಲ್ಲಿ ಟ್ರಾವೆಲ್ ಸಂಸ್ಥೆಯನ್ನು ಹೊಂದಿದೆ. ಬಾಲ್ಯದಿಂದಲೇ ಲೆಕ್ಸಿಗೆ ವಿಶ್ವವನ್ನು ಸುತ್ತುವ ಪ್ರಯಾಣ ಆರಂಭಿಸಿದ್ದರು ಎಂದು ವರದಿ ಮಾಡಿದೆ.
 
ಆದಾಗ್ಯೂ, ಅಲ್ಫೋರ್ಡ್ ಪ್ರಕಾರ, ಅವರು ಯಾವುದೇ ದಾಖಲೆಗಳನ್ನು ಮುರಿಯಬೇಕು ಎನ್ನುವ ಬಯಕೆಯಿರಲಿಲ್ಲ. ಪ್ರಯಾಣಿಸುವುದು ಹವ್ಯಾಸವಾಗಿತ್ತು. ಆದರೆ, 2016ರಲ್ಲಿ ವಿಶ್ವವನ್ನೇ ಸುತ್ತಿಬರಬೇಕು ಎನ್ನುವ ಬಗ್ಗೆ ಗಂಭೀರವಾದ ನಿರ್ಧಾರ ತೆಗೆದುಕೊಂಡರು. ಅದರಂತೆ ವಿಶ್ವದ ಎಲ್ಲಾ ದೇಶಗಳಿಗೆ ಭೇಟಿ ನೀಡಿ  ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 
 
18 ನೇ ವಯಸ್ಸಿನಲ್ಲಿ, ಆಲ್ಫರ್ಡ್ ಅವರು 72 ದೇಶಗಳಿಗೆ ಪ್ರವಾಸ ಮಾಡಿದ್ದೇವೆಂದು ಅರಿತುಕೊಂಡರು ಮತ್ತು ಅವರು ಮೇ 31 ರಂದು ಉತ್ತರ ಕೊರಿಯಾದಲ್ಲಿ ಆಗಮಿಸಿದ ಬಳಿಕ ಅವರು ವಿಶ್ವ ದಾಖಲೆಯನ್ನು ಮುರಿಯುವುದರ ಬಗ್ಗೆ ಯೋಚಿಸಿದ್ದರು.
 
ಅಲ್ಫೋರ್ಡ್ 18ನೇ ವಯಸ್ಸಿನಲ್ಲಿ ತಾನು 72 ದೇಶಗಳನ್ನು ಸುತ್ತಿ ಬಂದ ಬಗ್ಗೆ ಮೊದಲ ಬಾರಿಗೆ ಯೋಚಿಸತೊಡಗಿದ್ದರು. ಆವಾಗ ಯಾಕೆ ವಿಶ್ವ ದಾಖಲೆ ಬರೆಯಬಾರದು? ಎನ್ನುವ ಅಂಶ ಕಾಡುತ್ತಿತ್ತು. ಅದರಂತೆ ಮೇ 31 ರಂದು ಉತ್ತರ ಕೊರಿಯಾಗೆ ಬಂದ ಲೆಕ್ಸಿ ಅಲ್ಫೋರ್ಡ್ ವಿಶ್ವ ಸುತ್ತಿ ಬಂದ ಏಕೈಕ ಕಿರಿಯ ಯುವತಿ ಎನ್ನುವ ಗಿನ್ನಿಸ್ ದಾಖಲೆ ಬರೆದು ಪ್ರತಿಯೊಬ್ಬರಿಗೆ ಮಾದರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವೇದಿಕೆ, ಒಂದೇ ಸಮಯ..ಇಬ್ಬರ ಹೆಂಡಿರ ಮುದ್ದಿನ ಗಂಡನ ವಿವಾಹ