Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ವಿಂಡೀಸ್ ಮಾಡಿದ ಆ ಒಂದು ತಪ್ಪಿಗೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಮರೀಚಿಕೆಯಾಯ್ತು

ವಿಶ್ವಕಪ್ 2019: ವಿಂಡೀಸ್ ಮಾಡಿದ ಆ ಒಂದು ತಪ್ಪಿಗೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಮರೀಚಿಕೆಯಾಯ್ತು
ಲಂಡನ್ , ಶುಕ್ರವಾರ, 7 ಜೂನ್ 2019 (09:53 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ನಿನ್ನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಎಲ್ಲಾ ಅವಕಾಶಗಳಿತ್ತು. ಹಾಗಿದ್ದೂ ಒಂದೇ ತಪ್ಪಿಗೆ ಪಂದ್ಯವನ್ನೇ ಕಳೆದುಕೊಂಡಿತು.


ಆ ಒಂದು ತಪ್ಪನ್ನು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಪಂದ್ಯದ ನಂತರ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆರಂಭದಿಂದಲೂ ಪರದಾಡುತ್ತಿದ್ದ ಆಸೀಸ್ 200 ರ ಗಡಿ ದಾಟಲೂ ಕಷ್ಟವಾಗುತ್ತಿತ್ತು.

ಆದರೆ ಕೊನೆಯಲ್ಲಿ ಬಂದ ನಥನ್ ಕಲ್ಟ್ನರ್ ನಿಲೆ ಆಸೀಸ್ ಇನಿಂಗ್ಸ್ ಗತಿಯನ್ನೇ ಬದಲಿಸಿದರು. ಅವರು 60 ಎಸೆತಗಳಲ್ಲಿ 92 ರನ್ ಸಿಡಿಸಿ ತಂಡದ ಮೊತ್ತ 288 ಕ್ಕೇರುವಂತೆ ನೋಡಿಕೊಂಡರು. ನಥನ್ 60 ರನ್ ಗಳಿಸಿದ್ದಾಗ ವಿಂಡೀಸ್ ಅವರ ಕ್ಯಾಚ್ ಕೈ ಚೆಲ್ಲಿತು. ಒಂದು ವೇಳೆ ಆ ಕ್ಯಾಚ್ ಹಿಡಿದಿದ್ದರೆ ಆಸೀಸ್ ಮೊತ್ತ ಇಷ್ಟು ಬೆಳೆಯುತ್ತಿರಲಿಲ್ಲ.

ಆದರೆ 288 ರನ್ ಗಳನ್ನು ಉತ್ತಮವಾಗಿಯೇ ಬೆನ್ನಟ್ಟುತ್ತಿತ್ತು. ಆದರೆ 28 ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ ಹೆಟ್ ಮೈರ್ ರನೌಟ್ ಆಗುವುದರೊಂದಿಗೆ ವಿಂಡೀಸ್ ಕುಸಿತ ಕಾಣಲು ಆರಂಭವಾಯಿತು. ಅಂತಿಮವಾಗಿ ವಿಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಲಷ್ಟೇ ಶಕ್ತವಾಗಿ 15 ರನ್ ಗಳ ಸೋಲನುಭವಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಅಭಿನಂದಿಸಿದರೂ ಟ್ರೋಲ್ ಗೊಳಗಾದ ಸಾನಿಯಾ ಮಿರ್ಜಾ