Select Your Language

Notifications

webdunia
webdunia
webdunia
webdunia

ನಾಗಚೈತನ್ಯ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್!

ನಾಗಚೈತನ್ಯ  ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್!
ಮುಂಬೈ , ಮಂಗಳವಾರ, 23 ನವೆಂಬರ್ 2021 (16:36 IST)
ಇಂದು ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಅವರ ಹುಟ್ಟು ಹಬ್ಬ. ಹಾಗಾಗಿ, ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗೆ ಹೊಸ ಸರ್ಪ್ರೈಸ್  ಸಿಕ್ಕಿದೆ.
ಅದು ಹೊಸ ಸಿನಿಮಾದ ಟೀಸರ್ . ನಾಗಚೈತನ್ಯ ಮುಂದಿನ ಸಿನಿಮಾ ಬಂಗಾರ್ರಾಜುವಿನ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಾಗಚೈತನ್ಯ ತಂದೆ ನಾಗಾರ್ಜುನ  ಕೂಡ ನಟಿಸುತ್ತಿರುವುದು ವಿಶೇಷ. ಚಿತ್ರದಲ್ಲಿ ಬೇರೇನೂ ಅಲ್ಲ, ತಂದೆ ಮಗನ ಜೋಡಿಯ ದೃಶ್ಯಗಳನ್ನು ಕಾಣಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ, ಇಂದು ಅದರ ಸಣ್ಣ ಝಲಕ್ ಸಿಕ್ಕಿದೆ ಮತ್ತು ಟೀಸರ್ನಲ್ಲಿ ನಟ ಬಂಗಾರ್ರಾಜುವಾಗಿ ಅತ್ಯಂತ ಉತ್ಸಾಹದಿಂದ ಮಿಂಚುತ್ತಿದ್ದಾರೆ.
ಸುಮಾರು ವರ್ಷಗಳ ಬಳಿಕ ತಂದೆ –ಮಗ ಇಬ್ಬರೂ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 2014ರಲ್ಲಿ ಬಿಡುಗಡೆ ಆಗಿದ್ದ ಮನಂ ಸಿನಿಮಾದಲ್ಲಿ ಕೂಡ ಅವರಿಬ್ಬರು ತೆರೆ ಹಂಚಿಕೊಂಡಿದ್ದರು. ಬಂಗಾರ್ರಾಜು ಸಿನಿಮಾದ ಟೀಸರ್ ಹಂಚಿಕೊಳ್ಳುತ್ತಾ ನಟ ನಾಗಾರ್ಜುನ, “ನಮ್ಮ. ಅವನ ಹುಟ್ಟುಹಬ್ಬವನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಿನ್ನನ್ನು ಪ್ರೀತಿಸುತ್ತೇನೆ ರಾ” ಎಂದು ಬರೆದುಕೊಂಡಿದ್ದಾರೆ.
ನಿನ್ನೆ, ಈ ಸಿನಿಮಾದಲ್ಲಿನ ನಾಗಚೈತನ್ಯ ಮೊದಲ ಲುಕ್ ಅನ್ನು ಬಿಡುಗಡೆ ಮಾಡಲಾಗಿತ್ತು. ಹಿಂದಿನ ಸಿನಿಮಾಗಳ ಲುಕ್ಗಳಿಗಿಂತ ಭಿನ್ನವಾಗಿರುವ ಈ ಚಿತ್ರದಲ್ಲಿನ ಅವರ ಫ್ಯಾನ್ಸಿ ಅವತಾರ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿದೆ. ಈ ಸಿನಿಮಾದಲ್ಲಿ, ನಾಗಚೈತನ್ಯ ಒಂದು ಉತ್ಸಾಹಭರಿತ ಮತ್ತು ಡೈನಮಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಮುಂದಿನ ಸಿನಿಮಾದ ಬಿಗ್ ಅಪ್​ಡೇಟ್!