Select Your Language

Notifications

webdunia
webdunia
webdunia
webdunia

ರಾಜಮೌಳಿ ಮುಂದಿನ ಸಿನಿಮಾದ ಬಿಗ್ ಅಪ್​ಡೇಟ್!

ರಾಜಮೌಳಿ ಮುಂದಿನ ಸಿನಿಮಾದ ಬಿಗ್ ಅಪ್​ಡೇಟ್!
ಮುಂಬೈ , ಮಂಗಳವಾರ, 23 ನವೆಂಬರ್ 2021 (16:10 IST)
ಎಸ್.ಎಸ್. ರಾಜಮೌಳಿ ಅವರ ಕಲೆಯೇ ಅಂತಹದ್ದು. ಅವರು ಒಮ್ಮೆ ಪಾತ್ರದ ಬಗ್ಗೆ ಆಲೋಚನೆ ಮಾಡಿದರು ಎಂದರೆ, ಅದಕ್ಕೆ ಸೂಕ್ತವಾದ ಕಲಾವಿದರನ್ನೂ ಕೂಡ ಆಯ್ಕೆ ಮಾಡುತ್ತಾರೆ.
ಖ್ಯಾತ ನಟ ರಾನಾ ದಗ್ಗುಬಾಟಿ ಅವರಿಗೆ ‘ಬಾಹುಬಲಿ’ ಚಿತ್ರದಲ್ಲಿ ವಿಲನ್ ಪಾತ್ರ ನೀಡಿದ್ದರು ರಾಜಮೌಳಿ. ಈಗ ಅವರ ಮುಂದಿನ ಚಿತ್ರಕ್ಕಾಗಿ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ. ಖ್ಯಾತ ನಟ ಈ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಇನ್ನೇನು ಪ್ರಚಾರ ಕಾರ್ಯಕ್ಕೆ ಚಾಲನೆ ಸಿಗಲಿದೆ. ರಾಜಮೌಳಿ ಸಿನಿಮಾದಲ್ಲಿ ಅದ್ದೂರಿತನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಅದು ‘ಆರ್ಆರ್ಆರ್’ ಚಿತ್ರದಲ್ಲೂ ಮುಂದುವರಿದಿದೆ ಎಂಬುದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ. ಈ ಸಿನಿಮಾ ರಿಲೀಸ್ ಆದ ನಂತರ ರಾಜಮೌಳಿ ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಅದಾದ ಬಳಿ ಮಹೇಶ್ ಬಾಬು ಜತೆ ಅವರು ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಪಾತ್ರದ ಆಯ್ಕೆ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆಯಂತೆ! ಹಾಗಾದರೆ ಮಹೇಶ್ ಬಾಬು-ರಾಜಮೌಳಿ ಸಿನಿಮಾಗೆ ವಿಲನ್ ಯಾರು? ಚಿಯಾನ್ ವಿಕ್ರಮ್.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ವಿಕ್ರಮ್ ಅವರು ಸದ್ಯ ಪಾ. ರಂಜಿತ್ ಹಾಗೂ ರಜನಿಕಾಂತ್ ನಿರ್ಮಾಣದ, ಮಹೇಶ್ ನಾರಾಯಣ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಕೂಡ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ನೆನೆದು ಗಣೇಶ್ ಭಾವುಕ