Publish Date: Tue, 23 Nov 2021 (12:25 IST)
Updated Date: Tue, 23 Nov 2021 (12:31 IST)
ಬೆಂಗಳೂರು: ತಮ್ಮ ಸಖತ್ ಸಿನಿಮಾ ರಿಲೀಸ್ ಗೆ ಮುನ್ನ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ನಮ್ಮನ್ನಗಲಿದ ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಅಪ್ಪು ಸರ್ ನನ್ನ ಸಹೋದರ ಸಮಾನಂತಿದ್ದರು. ಅವರು ಅಗಲಿ ಇಷ್ಟು ದಿನ ಕಳೆದರೂ ಈಗಲೂ ಅವರನ್ನು ನೆನೆಸಿಕೊಳ್ಳುತ್ತೇವೆ ಎಂದರೆ ಅವರ ಮೇಲಿರುವ ಅಭಿಮಾನ, ಪ್ರೀತಿಯೇ ಸಾಕ್ಷಿ. ಕನ್ನಡ ಚಿತ್ರರಂಗ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಅವರು ನಂ.1 ಆಗಿರುತ್ತಾರೆ. ಪವರ್ ಸ್ಟಾರ್ ಯಾವತ್ತೂ ಪವರ್ ಸ್ಟಾರ್ ಎಂದು ಗಣೇಶ್ ಸ್ಮರಿಸಿಕೊಂಡಿದ್ದಾರೆ.