Webdunia - Bharat's app for daily news and videos

Install App

ಋತುಸ್ರಾವದದ ಮೂಲಕ ಕಂಡುಹಿಡಿಯಬಹುದು ನಿಮ್ಮಲ್ಲಿರುವ ರೋಗ

Webdunia
ಬುಧವಾರ, 20 ಡಿಸೆಂಬರ್ 2017 (06:52 IST)
ಬೆಂಗಳೂರು: ಹೆಣ್ಣು ಮಕ್ಕಳಿಗೆ ತಿಂಗಳಿಗೆ ಒಂದು ಸಾರಿ ಪಿರಿಯಡ್ಸ್ ಆಗುತ್ತದೆ. ಗರ್ಭಾಶಯದಲ್ಲಿರುವ ಅಂಡಾಣುವಿನ ಜೊತೆಗೆ ವಿರ್ಯಾಣು ಸೇರದಿದ್ದಾಗ  ಅದು ಒಡೆದು ಹೋಗಿ ರಕ್ತದ ರೂಪದಲ್ಲಿ ಹೊರಹೋಗುವುದೇ ಋತುಸ್ರಾವ ಎನ್ನುತ್ತೆವೆ. ಈ ಸಂದರ್ಭದಲ್ಲಿ ಹೊರಗೆ ಬರುವ ಬ್ಲೀಡಿಂಗ್ ನಿಂದ ಅವರಿಗೆ ಯಾವ ರೋಗವಿದೆ ಎಂದು ತಿಳಿಯಬಹುದು.


ನಸು ಕಿತ್ತಳೆ ಬಣ್ಣ: ಪಿರಿಯಡ್ಸ್ ಸಮಯದಲ್ಲಿ ಬ್ಲೀಡಿಂಗ್ ನಸು ಕಿತ್ತಳೆ ಬಣ್ಣದಲ್ಲಿದ್ದರೆ ಅವರಿಗೆ ಯಾವ ಸಮಸ್ಯೆ ಇಲ್ಲ ಎಂದರ್ಥ. ಆದರೆ ಅದರಲ್ಲಿ ಕೆಟ್ಟ ವಾಸನೆ ಇದ್ದರೆ ಇನ್ ಫೆಕ್ಷನ್ ಅಥವಾ ಎಸ್.ಟಿ.ಡಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು.
ನಸು ಕೆಂಪು ಬಣ್ಣ: ಈ ಬಣ್ಣದ  ಬ್ಲೀಡಿಂಗ್ ಇದ್ದರೆ ಅವರು ಆರೋಗ್ಯವಾಗಿದ್ದಾರೆ ಎಂದರ್ಥ. ಇದಕ್ಕೆ ಕಾರಣ ಮಹಿಳೆಯರು ಸೇವಿಸುವ ಆಹಾರ ಮತ್ತು ಅವರ ಶರೀರ ಸಮತೋಲನ.


ಕಪ್ಪು ಅಥವಾ ಗ್ರೇ ಬಣ್ಣ: ಈ ಬಣ್ಣದ  ಬ್ಲೀಡಿಂಗ್ ಇದ್ದರೆ ಅವರು ತುಂಬಾ ಎಚ್ಚರದಿಂದಿರಬೇಕು. ಯಾಕೆಂದರೆ ಇದು ಗರ್ಭಪಾತವಾಗುವ ಲಕ್ಷಣವಾಗಿದೆ ಅಥವಾ ಯಾವುದೊ ರೋಗದ ಲಕ್ಷಣವಾಗಿದೆ. ಇಂತವರು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ.
ಕೆಂಪು ಬಣ್ಣ: ಇದು ಹೊಸ ರಕ್ತವಾಗಿರುತ್ತದೆ. ಇದು ದೇಹದಿಂದ ಬೇಗನೆ ಹೊರಬರುತ್ತದೆ ಹಾಗು ತುಂಬಾ ಹಗುರವಾಗಿರುತ್ತದೆ. ಇದು ಅಧಿಕ ರಕ್ತಸ್ರಾವವಾಗುವಾಗ ಹೊರಬರುತ್ತದೆ.


ನಸು ನೀಲಿ ಬಣ್ಣ: ಈ ತರಹದ ಬ್ಲೀಡಿಂಗ್ ಕಾಣಿಸಿಕೊಂಡರೆ  ಅದು ದೇಹದ ಟೆಂಪ್ರೇಚರ್ ಕಡಿಮೆಯಾಗಿದೆ ಎಂದರ್ಥ. ಇದರಿಂದಾಗಿ ಬ್ಲಡ್ ಹೆಪ್ಪುಗಟ್ಟಿ ನಂತರ ತುಂಬಾ ನೋವಿನ ಜೊತೆಗೆ ಹೋರಬರುತ್ತದೆ.
ಡಾರ್ಕ ಬ್ರೌನ್ ಬಣ್ಣ: ಇದು ಹಳೆಯ ರಕ್ತವಾಗಿದೆ. ಇದು ಹಲವಾರು ಸಮಯದಿಂದ  ಗರ್ಭಾಶಯದಲ್ಲಿ ಸಂಗ್ರಹವಾಗಿದ್ದು, ಬಹಳ ಸಮಯದ ನಂತರ ಹೊರಬರುತ್ತದೆ. ಇದರಿಂದ ಯಾವುದೆ ಸಮಸ್ಯೆ ಇಲ್ಲ.
ನಸು ಗುಲಾಬಿ ಬಣ್ಣ: ಇದು ಕಡಿಮೆ ಈಸ್ಟ್ರೋಜನ್ ಹಾಗು ಕಡಿಮೆ ನ್ಯೂಟ್ರಿಶನ್ ನಿಂದ ಬರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಓಸ್ಟಿಯೋಪೊರೋಸಿಸ್ ಸಮಸ್ಯೆ ಬರುತ್ತದೆ. ಇದು ಮುಟ್ಟು ನಿಲ್ಲುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments