Select Your Language

Notifications

webdunia
webdunia
webdunia
webdunia

ಅಲೆಲೇ ವೀಳ್ಯೆದೆಲೆ! ಏನೀದು ನಿನ್ನೆಯ ಲೀಲೆ ....!

ಅಲೆಲೇ ವೀಳ್ಯೆದೆಲೆ! ಏನೀದು ನಿನ್ನೆಯ ಲೀಲೆ ....!
ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (14:26 IST)
ವೀಳ್ಯೆದೆಲೆ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಸಾಮಾನ್ಯವಾಗಿ ಪೂಜೆಗಳಲ್ಲಿ ಇದರ ಬಳಕೆ ಜಾಸ್ತಿ ಹಾಗೇ ಕೆಲವರು ಇದರ ಜೊತೆಗೆ ಅಡಿಕೆ ಸೇರಿಸಿ ತಿನ್ನುವವರೂ ಇದ್ದಾರೆ. ಇದೆಲ್ಲದರ ಹೊರತಾಗಿ ಇದು ಬಹು ಉಪಯೋಗಿ ಎಂಬುದು ನಿಮಗೆ ಗೊತ್ತೇ..
ಹೌದು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ವೀಳ್ಯದೆಲೆ ಸಾಕಷ್ಟು ರೋಗಗಳಿಗೆ ಪರಿಣಾಮಕಾರಿ ಔಫದಿಯಾಗಿದೆ ವೀಳ್ಯದೆಲೆಗಳು ಕಾಮೋತ್ತೇಜಕವಾಗಿ, ನಂಜು ನಿರೋಧಕವಾಗಿ ಮತ್ತು ಮೌತ್ ಫ್ರೆಶ್ನರ್ ಆಗಿ ಸಹ ಬಳಸಲಾಗುತ್ತದೆ.
 
ವೀಳ್ಯದ ಎಲೆಯ ಅದ್ಭುತ ಔಷಧೀಯ ಉಪಯೋಗಗಳು
 
1. ಮಲಬದ್ಧತೆಯನ್ನು ಸರಾಗಗೊಳಿಸುತ್ತದೆ-
 
ವೀಳ್ಯದೆಲೆ ಜೀರ್ಣಕ್ರಿಯೆಯನ್ನು ವೃದ್ಧಿಸಲು ಇದು ಸಹಾಯಕಾರಿಯಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಜೀರ್ಣವ್ಯವಸ್ಥೆಯನ್ನು ಹೆಚ್ಚಿಸುವುದರ ಜೊತೆಗೆ ಮಲಬದ್ಧತೆ ನಿವಾರಿಸುತ್ತದೆ. ನೀವು ನಿತ್ಯವು ಊಟವಾದ ನಂತರ ಒಂದು ವೀಳ್ಯದ ಎಲೆಯನ್ನು ಅಗೆದು ಅದರ ರಸವನ್ನು ನುಂಗುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
 
2. ಗ್ಯಾಸ್ಟ್ರಿಕ್ ನೋವನ್ನು ಕಡಿಮೆಯಾಗಿಸುತ್ತದೆ-
ಇದು ಡ್ಯುಯೊಡಿನಮ್ ಅನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್ ಮತ್ತು ಟಾಕ್ಸಿನ್‌ಗಳಿಂದ ದೇಹವನ್ನು ಮುಕ್ತಗೊಳಿಸುತ್ತದೆ. ಇದು ಹೊಟ್ಟೆಯ ಅಸಮತೋಲನದ PH ಮಟ್ಟಗಳ ಕಾರಣದಿಂದ ಉಂಟಾಗುವ ಆಮ್ಲೀಯತೆಯನ್ನು ಮತ್ತಷ್ಟು ಕಡಿಮೆ ಮಾಡುವುದರ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ.
 
3. ಬಾಯಿಯ ಆರೋಗ್ಯವನ್ನು ಉತ್ತೇಜಿಸುತ್ತದೆ
ವೀಳ್ಯದ ಎಲೆಯು ಉಸಿರಾಟವನ್ನು ರಿಫ್ರೆಶ್ ಮಾಡಲು ಸಹಾಯಕಾರಿಯಾಗಿದೆ. ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ಇತರ ಬಾಯಿಯ ರೋಗಕಾರಕಗಳಿಂದ ಬಾಯಿಯನ್ನು ರಕ್ಷಿಸುತ್ತದೆ. ನೀವು ವೀಳ್ಯದ ಎಲೆಯನ್ನು ಅಗಿಯುವುದಾದರೆ, ಅದು ಬಾಯಿಯನ್ನು ಶುದ್ಧೀಕರಿಸುವುದರ ಜೊತೆಗೆ ಬಾಯಿಯ ಕೆಟ್ಟ ವಾಸನೆಯನ್ನು ತಡೆಯುತ್ತದೆ.
 
4. ಕೆಮ್ಮು ನಿವಾರಿಸುತ್ತದೆ-
ನಿರಂತರ ಕೆಮ್ಮು ಇದ್ದಲ್ಲಿ ವೀಳ್ಯದ ಎಲೆಗಳು ತುಂಬಾನೇ ಪ್ರಯೋಜನಕಾರಿ. ವೀಳ್ಯದೆಲೆಗೆ ಸ್ವಲ್ಪ ಜೇನು ಮತ್ತು ಕಾಳುಮೆಣಸು ಸೇರಿಸಿ ಅಗಿಯುವುದರಿಂದ ಕೆಮ್ಮು, ಕಫ ಹಾಗೂ ಅದರಿಂದ ಉಂಟಾಗುವ ಎದೆ ಉರಿಯನ್ನು ಇದು ಕಡಿಮೆ ಮಾಡುತ್ತದೆ.
 
5. ಗಾಯಗಳ ನಿವಾರಣೆ
ವೀಳ್ಯದ ಎಲೆಗಳ ಔಷಧೀಯ ಗುಣಗಳು ಗಾಯಗಳನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗಿದೆ. ಅದರ ಕೆಲವು ಎಲೆಗಳನ್ನು ತೆಗೆದುಕೊಂಡು ಜಜ್ಜಿ, ಅದರ ರಸವನ್ನು ಹೊರತೆಗೆದು ಗಾಯ ಮೇಲೆ ಲೇಪಿಸುವುದರಿಂದ ಗಾಯವನ್ನು ಶೀಘ್ರ ಗುಣಮುಖವಾಗಿಸಬಹುದು.
 
6. ಕಿವಿ ನೋವು 
ಕಿವಿ ನೋವುಗಳಿಗಾಗಿ ವೀಳ್ಯದೆಲೆಯ ರಸ ಅಥವಾ ಅದರ ತೈಲ ಉತ್ತಮ ಪರಿಹಾರವಾಗಿದೆ. ವೀಳ್ಯದೆಲೆಯ ರಸ ಅಥವಾ ಅದರ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಮಾಡಿ ಕಿವಿಗೆ ಎರಡು ಹನಿಗಳನ್ನು ಹಾಕುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
 
7. ದೇಹದ ಕೆಟ್ಟ ವಾಸನೆಯನ್ನು ತಡೆಯುತ್ತದೆ-
ವೀಳ್ಯದೆಲೆಯ ದೇಹದ ವಾಸನೆಯನ್ನು ತಡೆಯಲು ಸಹಾಯಮಾಡುತ್ತದೆ. ಇಡೀ ದಿನ ದೇಹದಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸಲು ನಿಮ್ಮ ಸ್ನಾನದ ನೀರಿನಲ್ಲಿ ವೀಳ್ಯದ ಎಲೆಯ ರಸ ಅಥವಾ ಎಣ್ಣೆಯನ್ನು ಸೇರಿಸಿ.
 
8. ತಲೆನೋವನ್ನು ಕಡಿಮೆಯಾಗಿಸುತ್ತದೆ-
ನೀವು ತೀವ್ರ ತಲೆನೋವಿನಿಂದ ಬಳಲುತ್ತಿದ್ದರೆ,  ವೀಳ್ಯದೆಲೆಗಳು ನಿಮ್ಮ ಉಪಯೋಗಕ್ಕೆ ಬರುತ್ತದೆ. ಈ ಎಲೆಗಳು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿವೆ. ಆದ ಕಾರಣ ದೇಹದ ಉಷ್ಣತೆಯನ್ನು ನಿಯಂತ್ರಿಸಿ ತಲೆ ನೋವನ್ನು ನಿವಾರಿಸುತ್ತದೆ
 
9. ಕಾಮೋತ್ತೇಜಕವಾಗಿದೆ-
ಇದು ಪ್ರಾಕೃತಿಕ ಕಾಮೋತ್ತೇಜಕವಾಗಿದ್ದು ಲೈಂಗಿಕ ತೊಂದರೆಗಳಿಂದ ಬಳಲುವವರಿಗೆ ರಾಮಬಾಣವೆಂದೇ ಹೇಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಗಳ ಮೇಲೆ ಕಲೆಯೇ ಈ ಸರಳ ಸೂತ್ರ ಪಾಲಿಸಿ.