Publish Date: Tue, 17 Sep 2019 (09:08 IST)
Updated Date: Tue, 17 Sep 2019 (09:11 IST)
ಬೆಂಗಳೂರು: ಪತಿಯನ್ನು ಕಡೆಗಣಿಸಿ ಬಾಸ್ ಜತೆ ಅಕ್ರಮ ಸಂಬಂಧ ಹೊಂದುವ ಮಹಿಳೆಯರ ಬಗ್ಗೆ ಕೆಲವು ಜೋಕ್ ಗಳನ್ನು ಕೇಳುತ್ತಿರುತ್ತೇವೆ. ಆದರೆ ಕೆಲವರ ಜೀವನದಲ್ಲಿ ಇದುವೇ ನಿಜವಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ಪತಿಯಾದವನು ಏನು ಮಾಡಬೇಕು? ಮನೆಯವರ ಬಲವಂತಕ್ಕೆ ಮದುವೆಯಾದಾಗ ಇಂತಹ ಸಮಸ್ಯೆಗಳು ಬರಬಹುದು. ಒಂದು ವೇಳೆ ನಿಮಗೆ ಮಾತುಕತೆಯ ಮೂಲಕ ಈ ಅಕ್ರಮ ಸಂಬಂಧವನ್ನು ಕೊನೆಗಾಣಿಸಿ ಆಕೆಯ ಜತೆ ಹೊಸ ಬಾಳು ಬಾಳುವ ಆತ್ಮವಿಶ್ವಾಸ ಮತ್ತು ವಿಶಾಲ ಮನೋಭಾವವಿದ್ದಲ್ಲಿ ಸಂಬಂಧ ಮುಂದುವರಿಸಬಹುದು. ಆದರೆ ಯಾವುದರಿಂದಲೂ ಸರಿ ಹೋಗದು ಎಂದರೆ ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.