Select Your Language

Notifications

webdunia
webdunia
webdunia
webdunia

ನನಗೆ ಅತ್ತೆ-ಮಾವನ ಜತೆಗಿರುವುದು ಇಷ್ಟವಿಲ್ಲ! ಏನು ಮಾಡಲಿ?

ನನಗೆ ಅತ್ತೆ-ಮಾವನ ಜತೆಗಿರುವುದು ಇಷ್ಟವಿಲ್ಲ! ಏನು ಮಾಡಲಿ?
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (09:06 IST)
ಬೆಂಗಳೂರು: ಕೆಲವರು ಅತ್ತೆ-ಮಾವನ ಜತೆಗೆ ಒಂದೇ ಮನೆಯಲ್ಲಿರಲು ಇಷ್ಟಪಡುವುದಿಲ್ಲ. ಇದಕ್ಕೆ ಸಮಾಜ ನೇರವಾಗಿ
ಸೊಸೆಯಾದವಳನ್ನೇ ದೂಷಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಇದಕ್ಕೆ ಅತ್ತೆ-ಮಾವನಲ್ಲೂ ದೋಷವಿರಬಹುದು.



ಮದುವೆಯಾಗಿ ಮನೆಗೆ ಬರುವ ಹೆಣ್ಣು ಅತ್ತೆ ಮಾವನೂ ತನ್ನ ತಂದೆ ತಾಯಿಯಂತೆ ಸ್ವತಂತ್ರವಾಗಿರಲು ಬಿಡಬೇಕೆಂದು ಬಯಸುತ್ತಾಳೆ. ಇಂದಿನ ಕಾಲದಲ್ಲಿ ಅದು ಸಹಜ ಕೂಡಾ. ಆದರೆ ಕೆಲವೊಮ್ಮೆ ಜನರೇಷನ್ ಗ್ಯಾಪ್ ಪ್ರಭಾವವೋ, ತಮ್ಮ ಕಾಲಕ್ಕೆ ಯೋಚಿಸುವ ಗುಣ ಹೊಂದಿರುವ ಕಾರಣಕ್ಕೋ ಅತ್ತೆ-ಮಾವನಿಗೂ ಸೊಸೆಯ ಮೇಲೆ ಹಿಡಿತ ಸಾಧಿಸಲು ಯತ್ನಿಸುವುದು, ಅದು ಮಾಡಬೇಡ, ಹೀಗೆ ಇರಬೇಡ ಎಂದು ಕಡಿವಾಣ ಹಾಕಲು ಯತ್ನಿಸುವುದು ಮಾಡುತ್ತಾರೆ. ಇದರಿಂದ ಸೊಸೆಯಾದವಳೂ ಈ ರೀತಿಯ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ಹೀಗಾಗಿ ಮದುವೆ ಎನ್ನುವುದು ಕೇವಲ ಗಂಡ-ಹೆಂಡತಿ ನಡುವಿನ ಸಾಮರಸ್ಯ ಮಾತ್ರವಲ್ಲ. ಅತ್ತೆ-ಮಾವ, ಸೊಸೆ ನಡುವಿನ ಹೊಂದಾಣಿಕೆಯೂ ಮುಖ್ಯವಾಗುತ್ತದೆ. ಸೊಸೆಯನ್ನು ಮಗಳಂತೇ ನಡೆಸಿಕೊಂಡರೆ, ಅತ್ತೆಯನ್ನು ಅಮ್ಮನಂತೆ ನೋಡಿದರೆ ಈ ಸಮಸ್ಯೆ ಬರದು.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟೇ ರಮಿಸಿದ್ರೂ ಸಂಭೋಗದ ಕೊನೆಯಲ್ಲಿ ಹೀಗಾಗುತ್ತಿದೆ!