Select Your Language

Notifications

webdunia
webdunia
webdunia
webdunia

ಈ ವಯಸ್ಸಲ್ಲಿ ಲೈಂಗಿಕ ಕಾಮನೆ ಕಡಿಮೆಯಾಗುತ್ತದೆ?

ಈ ವಯಸ್ಸಲ್ಲಿ ಲೈಂಗಿಕ ಕಾಮನೆ ಕಡಿಮೆಯಾಗುತ್ತದೆ?
ಬೆಂಗಳೂರು , ಮಂಗಳವಾರ, 4 ಜೂನ್ 2019 (09:10 IST)
ಬೆಂಗಳೂರು: ಮಹಿಳೆಯರಿಗೆ ಮಧ್ಯವಯಸ್ಸು ಅಂದರೆ 45 ವಯಸ್ಸು ದಾಟಿದ ಮೇಲೆ ಲೈಂಗಿಕ ಕಾಮನೆಗಳು ಕೊಂಚ ಕಡಿಮೆಯಾಗಬಹುದು. ಆದರೆ ಸಂಗಾತಿಯ ದೇಹತಣಿಸಲು ಆಗುತ್ತಿಲ್ಲ ಎಂದು ಅದೆಷ್ಟೋ ಮಂದಿ ಕೊರಗುತ್ತಾರೆ. ಅಸಲಿಗೆ ಈ ವಯಸ್ಸಲ್ಲಿ ಲೈಂಗಿಕ ಕಾಮನೆ ಕಡಿಮೆಯಾಗಲು ಕಾರಣವೇನು?


ಮಹಿಳೆಯರಿಗೆ ಇದು ಮುಟ್ಟು ನಿಲ್ಲುವ ವಯಸ್ಸು. ಈ ವಯಸ್ಸಿನಲ್ಲಿ ಹಲವು ದೈಹಿಕ, ಮಾನಸಿಕ ಬದಲಾವಣೆಗಳು ಸಹಜ. ಕೆಲವರಿಗೆ ಒಣ ಯೋನಿ ಸಮಸ್ಯೆ, ಹಾರ್ಮೋನ್ ಗಳ ಸಮಸ್ಯೆಯಿಂದ ಲೈಂಗಿಕಾಸಕ್ತಿ ಕುದುರದು.

ಇದಕ್ಕೆ ಆತಂಕಪಡಬೇಕಾಗಿಲ್ಲ. ಬದಲಾಗಿ ಇದು ಜೀವನದ ಇನ್ನೊಂದು ಮಗ್ಗುಲಿಗೆ ಬರುವ ವಯಸ್ಸು ಎಂದು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಒಳ್ಳೆಯದು. ಲೈಂಗಿಕ ಸಮಾಗಮ ನಡೆಸಲು ಸಾಧ್ಯವಾಗದಿದ್ದರೆ ಹಿಂದೆ ನಡೆಸಿದ ಸರಸದ ರಸ ನಿಮಿಷಗಳನ್ನು ಸಂಗಾತಿ ಜತೆ ಮಾತನಾಡುತ್ತಾ ಮನಸ್ಸು ಹಗುರ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸರಸವಾಡುವಾಗ ಮಕ್ಕಳ ಕೈಲಿ ಸಿಕ್ಕಿಬಿದ್ದರೆ ಏನು ಮಾಡೋದು?