Publish Date: Fri, 05 Jan 2018 (05:41 IST)
Updated Date: Fri, 05 Jan 2018 (05:43 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಪುರುಷರಿಗೆ ಹೆಚ್ಚು ಆಸಕ್ತಿಯಾ ಮಹಿಳೆಯರಿಗೆ ಹೆಚ್ಚು ಆಸಕ್ತಿಯಾ ಎಂದು ಚರ್ಚೆಗಳು ನಡೆದಿವೆ. ಆದರೆ ಇದೀಗ ಮಾಂಸ ಮಾರಾಟ ಮಾಡುವ ಸಂಸ್ಥೆಯೊಂದು ಸಸ್ಯಾಹಾರಿಗಳಾ ಮಾಂಸಾಹಾರಿಗಳ ಎಂದು ಸಮೀಕ್ಷೆ ನಡೆಸಿದೆ.
ಸಸ್ಯಾಹಾರ ಮಾಡುವರಿಗೆ ಹೆಚ್ಚು ಲೈಂಗಿಕಾಸಕ್ತಿ ಇರುತ್ತದೆಯೋ ಅಥವಾ ಮಾಂಸಾಹಾರ ಮಾಡುವವರೇ ಹೆಚ್ಚು ಸೆಕ್ಸ್ ಮಾಡುತ್ತಾರಾ ಎನ್ನುವ ಬಗ್ಗೆ ಸಂಸ್ಥೆ ಸಮೀಕ್ಷೆ ನಡೆಸಿದೆ.
ಇದರ ಪ್ರಕಾರ ಶೇ.16 ರಷ್ಟು ಸಸ್ಯಾಹಾರಿಗಳು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಿಲನ ಕ್ರಿಯೆ ನಡೆಸುತ್ತಾರೆ. ಅದೇ ಶೇ.42 ರಷ್ಟು ಮಾಂಸಾಹಾರಿಗಳು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸೆಕ್ಸ್ ನಡೆಸುತ್ತಾರೆ.
ಆದರೆ ಈ ಸರ್ವೇ ನಡೆಸಿರುವುದು ಬ್ರಿಟನ್ ಮೂಲದ ಮಾಂಸ ಮಾರಾಟ ಮಳಿಗೆ. ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾವಹಾರಿಕ ಉದ್ದೇಶದಿಂದ ಈ ಸಮೀಕ್ಷೆಯ ಫಲಿತಾಂಶ ಪ್ರಕಟಿಸಿರಲೂಬಹುದು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ