ಬೆಂಗಳೂರು: ವಯಸ್ಸಾದಂತೆ, ಒತ್ತಡದ ಪರಿಣಾಮದಿಂದ ಅಥವಾ ಜೀವನಶೈಲಿಯಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ವೀರ್ಯಾಣುಗಳ ಸಂಖ್ಯೆ ಹೆಚ್ಚಬೇಕೆಂದರೆ ಯಾವ ಆಹಾರ ಸೇವಿಸಬೇಕು?
 
ಹಣ್ಣು ಹಂಪಲು
ಹೇರಳವಾಗಿ ಹಣ್ಣು ಸೇವಿಸುತ್ತಿರಿ. ಅದರಲ್ಲೂ ಬೀಟಾ ಕ್ಯಾರೊಟಿನ್ ಅಂಶ ಹೆಚ್ಚಿರುವ ಹಳದಿ ಮತ್ತು ಕಿತ್ತಳೆ ಬಣ್ಣದ ಹಣ್ಣುಗಳನ್ನು ಹೆಚ್ಚು ಸೇವಿಸಿ.
									
								
			        							
								
																	ಕೊಬ್ಬು ನಿಯಂತ್ರಣದಲ್ಲಿರಿಸಿ
ಅಧಿಕ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳಿಗೆ ಸಂತಾನ ಫಲ ನಿಧಾನವಾಗುತ್ತದೆ ಎನ್ನುವುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿ ಶರೀರದಲ್ಲಿ ಬೇಡದ ಕೊಬ್ಬು ಶೇಖರಣೆ ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ.
									
										
								
																	ಪೋಷಕಾಂಶಗಳು
ಆದಷ್ಟು ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ, ಡಿ ಮತ್ತು ಎ ಅಂಶ ಹಾಗೂ ಕ್ಯಾರೊಟಿನ್ ಅಂಶ ಹೇರಳವಾಗಿರುವಂತೆ ನೋಡಿಕೊಳ್ಳಿ.
									
											
							                     
							
							
			        							
								
																	ಬೊಜ್ಜು
ಸ್ಥೂಲಕಾಯಿಗಳಿಗೆ ಮಕ್ಕಳಾಗೋದು ನಿಧಾನ ಎನ್ನಲಾಗುತ್ತದೆ. ದಡೂತಿ ದೇಹ ಹೊಂದಿರುವವರಲ್ಲಿ ವೀರ್ಯಾಣುಗಳ ಸಂಖ್ಯೆ ಒಂದೇ ತೆರನಾಗಿರುವುದಿಲ್ಲ. ಹೀಗಾಗಿ ಆದಷ್ಟು ದೇಹಕ್ಕೆ ವ್ಯಾಯಾಮ ನೀಡಿ ಬೊಜ್ಜು ಬೆಳೆಯದಂತೆ ನೋಡಿಕೊಳ್ಳಿ.
									
			                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ