Publish Date: Wed, 03 Jan 2018 (08:24 IST)
Updated Date: Wed, 03 Jan 2018 (08:26 IST)
ಬೆಂಗಳೂರು: ಹುಡುಗಿಯರನ್ನು ಅಳುಮುಂಜಿಗಳು ಎನ್ನುತ್ತಾರೆ. ಆದರೆ ಗಂಡಸರು ಕಣ್ಣೀರು ಹಾಕೋದು ಅಪರೂಪ. ಅದು ಯಾಕೆ ಹೀಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ಇದಕ್ಕೆ ಕಾರಣ ಮೆದುಳಿನ ರಚನೆ ಎಂದು ತಜ್ಞರು ವಿವರಿಸುತ್ತಾರೆ. ಸ್ವಿಜರ್ ಲ್ಯಾಂಡ್ ವಿವಿಯ ತಜ್ಞರು ಸುಮಾರು 189 ಯುವಕರ ಮೆದುಳಿನ ಅಧ್ಯಯನ ನಡೆಸಿ ಇದಕ್ಕೆ ಕಾರಣ ತಿಳಿದುಕೊಂಡಿದ್ದಾರೆ.
ಈ ಅಧ್ಯಯನ ಪ್ರಕಾರ ಮೆದುಳಿನಲ್ಲಿ ಮನಸ್ಸಾಕ್ಷಿ ಮತ್ತು ಅನುಭೂತಿಗೆ ಸಂಪರ್ಕ ಸೇತುವೆಯಂತಿರುವ ಭಾಗವೊಂದರ ರಚನೆ ಕೆಲವು ಹುಡುಗರಲ್ಲಿ ವ್ಯತ್ಯಸ್ತವಾಗಿರುತ್ತದೆ. ಇದೇ ಕಾರಣಕ್ಕೆ ಹುಡುಗರು ಅಳಲ್ಲ. ಇದೇ ಕಾರಣಕ್ಕೆ ಅಂತಹ ಹುಡುಗರು ಹೆಚ್ಚು ಸೆಂಟಿಮೆಂಟ್ ಆಗಿರಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ಮುಂದುವರಿದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ