Publish Date: Wed, 03 Jan 2018 (08:20 IST)
Updated Date: Wed, 03 Jan 2018 (08:23 IST)
ಬೆಂಗಳೂರು: ಶೀತದ ನಂತರ ಕಾಡುವ ಸೈನಸ್ ತಲೆನೋವು ನಮ್ಮ ಸಾಮಾನ್ಯ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳೇನು ನೋಡೋಣ.
ದ್ರವಾಂಶ ಸೇವನೆ
ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಆದಷ್ಟು ಬಿಸಿ ಬಿಸಿಯಾದ ನೀರನ್ನು ಆಗಾಗ ಕುಡಿಯುತ್ತಿರುವುದು ದೇಹಕ್ಕೆ ಒಳ್ಳೆಯದು.
ಖಾರದ ಆಹಾರ
ಕಾಳುಮೆಣಸು, ಸಾಸಿವೆಯಂತಹ ಖಾರದ ಪದಾರ್ಥಗಳನ್ನು ಆದಷ್ಟು ಆಹಾರದಲ್ಲಿ ಸೇರಿಸಿ ಸೇವಿಸಿ. ಇದು ಕಫ ಕರಗಿಸುತ್ತದೆ. ಕೆಫೈನ್ ಅಂಶವಿರುವ ಆಹಾರ ಸೇವನೆ ಬೇಡ.
ನಿಂಬೆ ಪಾನೀಯಕ್ಕೆ ಜೇನುತುಪ್ಪ ಸೇರಿಸಿ
ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿಯುತ್ತಿರಿ. ಇದು ಗಟ್ಟಿಯಾದ ಕಫ ಕರಗಿಸುತ್ತದೆ.
ಸೂಪ್
ಸ್ವಲ್ಪ ಕಾಳು ಮೆಣಸು ಹಾಕಿದ ಟೊಮೆಟೋ ಸೂಪ್ ಕುಡಿಯಿರಿ. ಖಾರ ಖಾರವಾಗಿ ಸೇವಿಸುವುದರಿಂದ ನಾಲಿಗೆಗೆ ರುಚಿಯಷ್ಟೇ ಅಲ್ಲ, ಕಫವೂ ಕರಗುವುದು.
ಇದಲ್ಲದೆ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ನಿಮಗೆಲ್ಲಾ ಗೊತ್ತೇ ಇದೆಯಲ್ಲಾ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ