Select Your Language

Notifications

webdunia
webdunia
webdunia
webdunia

ಬಾಳೆ ಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಸ್ವಲ್ಪ ತಡೀರಿ!

ಬಾಳೆ ಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಸ್ವಲ್ಪ ತಡೀರಿ!
ಬೆಂಗಳೂರು , ಬುಧವಾರ, 3 ಜನವರಿ 2018 (08:27 IST)
ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಸುಲಭವಾಗಿ ಬಿಸಾಡಿ ಬಿಡುತ್ತೇವೆ. ಆದರೆ ಬಾಳೆ ಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಅದರ ಉಪಯೋಗ ತಿಳಿದುಕೊಳ್ಳಿ. ಇದನ್ನು ತಿಳಿದರೆ ಬಿಸಾಕಲಾರಿರಿ!
 

ಕಲೆಗಳು
ಮುಖದಲ್ಲಿ ಕಪ್ಪು ಕಲೆಗಳು, ಇತರ ಕಲೆಗಳು ಇದ್ದು ಅಸಹ್ಯವಾಗಿ ಕಾಣುತ್ತಿದ್ದರೆ, ನಿಯಮಿತವಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುತ್ತಿರಿ.

ಚರ್ಮ ಸುಕ್ಕುಗಟ್ಟುವುದಕ್ಕೆ
ಚರ್ಮ ಸುಕ್ಕುಗಟ್ಟಿದಂತಾಗುವುದಕ್ಕೆ ಬಾಳೆ ಹಣ್ಣಿನ ಸಿಪ್ಪೆಯನ್ನು ಮಸಾಜ್ ಮಾಡಿ. ಇದರಿಂದ ಚರ್ಮಕ್ಕೆ ಹೆಚ್ಚು ದ್ರವಾಂಶ ಒದಗಿದಂತಾಗುತ್ತದೆ. ಇದರಿಂದ ಸುಕ್ಕುಗಟ್ಟುವಿಕೆಯೂ ಮಾಯವಾಗುತ್ತದೆ.

ಗಾಯಗಳು
ಆಡುವಾಗ ಬಿದ್ದು ಜಜ್ಜಿದಂತೆ ಗಾಯವಾಗಿದ್ದರೆ ಬಾಳೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಒಂದು ರಾತ್ರಿಯಿಡೀ ಬಾಳೆ ಹಣ್ಣಿನ ಸಿಪ್ಪೆಯ ಭಾಗವನ್ನು ಗಾಯವಾದ ಭಾಗಕ್ಕೆ ಅಂಟಿಸಿಕೊಂಡರೆ ಬೇಗನೇ ಗುಣವಾಗುವುದು.

ಜಿಡ್ಡು ಹೋಗಲಾಡಿಸುತ್ತದೆ
ನಿಮ್ಮದು ಆಯಿಲೀ ಸ್ಕಿನ್ ಆಗಿದ್ದರೆ ಏನು ಮಾಡೋದು ಎಂದು ಚಿಂತೆ ಮಾಡಬೇಡಿ. ಬಾಳೆ ಹಣ್ಣಿನ  ಸಿಪ್ಪೆ ಚರ್ಮದಲ್ಲಿ ಜಿಡ್ಡಿನಂಶ ಬಿಡುಗಡೆಯಾಗುವುದನ್ನು ಕಡಿಮೆಗೊಳಿಸುತ್ತದೆ. ಇದರಿಂದ ಮುಖದಲ್ಲಿ ಜಿಡ್ಡಿನಂಶ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗರಿಗಿಂತ ಹುಡುಗೀರೇ ಬೇಗ ಅಳುತ್ತಾರೆ, ಯಾಕೆ ಗೊತ್ತಾ?!