Select Your Language

Notifications

webdunia
webdunia
webdunia
webdunia

ಎಷ್ಟು ನಿಧಾನವಾಗಿ ತಿಂಡಿ ತಿನ್ನೋದು ಅಂತ ಬೈತಾರಾ? ಚಿಂತೆ ಮಾಡಬೇಡಿ!

ಎಷ್ಟು ನಿಧಾನವಾಗಿ ತಿಂಡಿ ತಿನ್ನೋದು ಅಂತ ಬೈತಾರಾ? ಚಿಂತೆ ಮಾಡಬೇಡಿ!
ಬೆಂಗಳೂರು , ಶುಕ್ರವಾರ, 5 ಜನವರಿ 2018 (05:37 IST)
ಬೆಂಗಳೂರು: ಕೆಲವರಿಗೆ ಬೇಗ ತಿನ್ನುವ ಅಭ್ಯಾಸವಿರುವುದಿಲ್ಲ. ತಟ್ಟೆ ಮುಂದೆ ತುಂಬಾ ಹೊತ್ತು ಕೂತು ನಿಧಾನಕ್ಕೆ ತಿನ್ನುವವರು ಇನ್ನು ಕೀಳರಿಮೆ ಇಟ್ಟುಕೊಳ್ಳುವುದು ಬೇಡ. ಇದರಿಂದ ಲಾಭವೂ ಇದೆ. ಅವು ಯಾವುವು ಎಂದು ನೋಡೋಣ.
 

ತೂಕ ಕಳೆದುಕೊಳ್ಳುತ್ತೀರಾ?
ನಿಧಾನವಾಗಿ ತಿನ್ನುವುದರಿಂದ ದೇಹ ತೂಕ ಇಳಿಸುವುದು ಸುಲಭ ಎಂದರೆ ನೀವು ನಂಬಲೇಬೇಕು. ನಿಧಾನವಾಗಿ ತಿನ್ನುವುದರಿಂದ ಹೆಚ್ಚು ಕ್ಯಾಲೋರಿ ಗಳಿಸುತ್ತೀರಿ.

ಜೀರ್ಣಕ್ರಿಯೆ
ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಿಂದ. ನಾವು ಆಹಾರವನ್ನು ಸರಿಯಾಗಿ ಜಗಿದು ನಿಧಾನಕೆ ತಿಂದರೆ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ.

ಒತ್ತಡ
ನಿಧಾನವಾಗಿ ತಿನ್ನುವುದರಿಂದ ನೀವು ಆಹಾರ ಜಗಿಯುವುದರ ಕಡೆಗೆ ಹೆಚ್ಚು ಗಮನ ಕೊಡುತ್ತೀರಿ. ಸಹಜವಾಗಿ ಎಲ್ಲಾ ಒತ್ತಡಗಳನ್ನು ಕ್ಷಣ ಮರೆತು ಆಹಾರ ಸೇವಿಸುವುದರತ್ತ ನಿಮ್ಮ ಗಮನ ನೆಟ್ಟಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಲಸಿನ ಹಣ್ಣಿನ ಹಲವಾರು ತಿನಿಸುಗಳು: ಮನೆಯಲ್ಲಿ ಮಾಡುವ ಸರಳ ವಿಧಾನ