Daily Horoscope

Select Your Language

Notifications

webdunia
webdunia
webdunia
webdunia

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

oil
ಎಣ್ಣೆ ಅತಿಯಾಗಿ ಬಳಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು. ಒಂದು ದಿನದಲ್ಲಿ ಒಬ್ಬರು ಆಹಾರದ ಮೂಲಕ ಎಷ್ಟು ಎಣ್ಣೆ ಸೇವನೆ ಮಾಡುವುದು ಆರೋಗ್ಯಕರ ಇಲ್ಲಿದೆ ವಿವರ.

ಎಣ್ಣೆಯುಕ್ತ ಪದಾರ್ಥಗಳನ್ನು ಅತಿಯಾಗಿ ಬಳಸುವುದರಿಂದ ಕೊಲೆಸ್ಟ್ರಾಲ್, ಹೃದಯದ ಸಮಸ್ಯೆಗಳು ಬರಬಹುದು. ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 4 ರಿಂದ 7 ಟೇಬಲ್ ಸ್ಪೂನ್ ಅಥವಾ 20-25 ಗ್ರಾಂನಷ್ಟು ಎಣ್ಣೆ ಬಳಸಬಹುದು.

ಅಂದರೆ ನಿಮ್ಮ ಆಹಾರದ ಶೇ.10 ರಷ್ಟು ಮಾತ್ರ ಎಣ್ಣೆಯ ಅಂಶ ಇರಬಹುದು. ಉದಾಹರಣೆಗೆ 1000 ಕ್ಯಾಲೊರಿಗೆ 100 ಕ್ಯಾಲೊರಿಯಷ್ಟು ಎಣ್ಣೆ ಬಳಸಬಹುದಾಗಿದೆ. 1 ಗ್ರಾಂ ಎಣ್ಣೆಯಲ್ಲಿ 9 ಗ್ರಾಂನಷ್ಟು ಕ್ಯಾಲೊರಿಯಿರುತ್ತದೆ. ಆದಷ್ಟು ಕೊಬ್ಬಿನಂಶ ಕಡಿಮೆಯಿರುವ ಎಣ್ಣೆಯನ್ನು ಬಳಸಿ. ಇದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಆಯಿಲ್ ಹೆಚ್ಚು ಬಳಸಿ. ಇದು ಜೀರ್ಣಕ್ರಿಯೆಯನ್ನೂ ಸುಲಭ ಮಾಡುತ್ತದೆ. ಊಟದ ನಂತರ ಹೊಟ್ಟೆ ಗುಳು ಗುಳು ಆಗುವ ಅನುಭವವಾಗುತ್ತಿದ್ದರೆ, ಚರ್ಮದಲ್ಲಿ ಅಲರ್ಜಿ ಕಂಡುಬರುತ್ತಿದ್ದರೆ ಎಣ್ಣೆಯ ಅಂಶವನ್ನು ಕಡಿಮೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ