ಬೆಂಗಳೂರು : ಕುಕ್ಕರ್ , ಅಲ್ಯುಮಿನಿಯಂ ಪಾತ್ರೆಗಳನ್ನು ಹೆಚ್ಚಾಗಿ ಬಳಸಿದಾಗ ಅದು ಹೊಳಪನ್ನು ಕಳೆದುಕೊಳ್ಳುತ್ತದೆ. ಅದನ್ನು ಮತ್ತೆ ಹೊಳಪಾಗಿ ಮಾಡಲು ಈ ಟಿಪ್ ಫಾಲೋ ಮಾಡಿ.
ಕುಕ್ಕರ್, ಅಲ್ಯುಮಿನಿಯಂ ಪಾತ್ರೆಗಳನ್ನ ಹೆಚ್ಚಾಗಿ ಬಳಸಿದಾಗ ಅದರ ತಳದಲ್ಲಿ ಕಪ್ಪಾದ ಕಲೆ ಹಿಡಿಯುತ್ತದೆ. ಇದನ್ನು ಸೋಪ್ ನಿಂದ ಕ್ಲೀನ್ ಮಾಡಲು ಆಗುವುದಿಲ್ಲ. ಆದಕಾರಣ ಅದನ್ನು ತೆಗೆಯಲು ನಿಂಬೆ ಹಣ್ಣಿನ ರಸವನ್ನು ಕುಕ್ಕರ್ ಗೆ ಹಚ್ಚಿ ಸಿಪ್ಪೆಯಿಂದ ಒಣಗುವವರೆಗೂ ಉಜ್ಜಿ. ಬಳಿಕ ಬಿಸಿ ನೀರನ್ನು ಹಾಕಿ ಮುಚ್ಚುಳ ಮುಚ್ಚಿ 15 ನಿಮಿಷ ಹಾಗೇ ಇಡಿ. ಬಳಿಕ ನೀರನ್ನು ತೆಗೆದು ಇದ್ದಿಲಿನ ಪುಡಿಯಿಂದ ಕುಕ್ಕರ್ ನ್ನು ಉಜ್ಜಿ ತೊಳೆಯಿರಿ. ಇದರಿಂದ ಕುಕ್ಕರ್ ಕ್ಲೀನ್ ಆಗಿ ಹೊಳೆಯುತ್ತದೆ.