Select Your Language

Notifications

webdunia
webdunia
webdunia
webdunia

ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಬಳಸಿ ನೋಡಿ

ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಬಳಸಿ ನೋಡಿ
ಬೆಂಗಳೂರು , ಗುರುವಾರ, 8 ಏಪ್ರಿಲ್ 2021 (07:46 IST)
ಬೆಂಗಳೂರು : ಸುಂದರವಾದ, ಮೊಡವೆ ಮುಕ್ತ ತ್ವಚೆಯನ್ನು ಪಡೆಯುವುದು ಎಲ್ಲಾ ಹೆಣ‍್ಣುಮಕ್ಕಳ ಆಸೆಯಾಗಿರುತ್ತದೆ. ಆದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಮುಖವನ್ನು ಹಾಳುಮಾಡಿಕೊಳ್ಳುವ ಬದಲು ಈ ಹಸಿರು ಸಸ್ಯಗಳನ್ನು ಬಳಸಿ ನಿಮ್ಮಿ ತ್ವಚೆಯನ್ನು ಸುಂದರವಾಗಿಸಿಕೊಳ್ಳಿ.

*ಬೇವು : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಮೊಡವೆಗಳನ್ನು ನಿವಾರಿಸುತ್ತದೆ. ಹಾಗಾಗಿ ಬೇವಿನ ಎಲೆಗಳನ್ನು ರುಬ್ಬಿ ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.

*ತುಳಸಿ : ಇದು ಬ್ಯಾಕ್ಟೀರಿಯಾ ವಿರೊಧಿ ಮತ್ತು ಆ್ಯಂಟಿ ಫಂಗಸ್ ಗುಣಗಳನ್ನು ಹೊಂದಿದೆ. ಹಾಗಾಗಿ ತುಳಸಿ ಎಲೆಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು ನಿವಾರಣೆಯಾಗುತ್ತವೆ.

*ಅಲೋವೆರಾ ಜೆಲ್ : ಇದು ಚರ್ಮದ  ಶುಷ್ಕತೆ, ಮಂದತೆ, ಕಲೆಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಅಲೋವೆರಾ ಗಿಡದ ಜೆಲ್ ಅನ್ನು ತೆಗೆದು ಮುಖಕ್ಕೆ ಹಚ್ಚಿ.

*ಪುದೀನಾ : ಇದು ಮೊಡವೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.  ಹಾಗಾಗಿ ಪುದೀನಾ ಪೇಸ್ಟ್ ಅನ್ನು  ಮೊಡವೆಗಳ ಮೇಲೆ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ ಎದ್ದಾಗ ಪದೇ ಪದೇ ಸೀನು ಬರುತ್ತಿದೆಯೇ? ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ