ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದ ಮಹಿಳೆಯರಲ್ಲೂ ಬಿಳಿ ಸೆರಗು ( ವಾಯ್ಟ್ ಬ್ಲೇಡ್ ) ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನ ತಡೆಗಟ್ಟಲು ಹಲವಾರು ವೈದ್ಯರಲ್ಲಿ ಚಿಕಿತ್ಸೆ ಪಡೆದರು ಸಹ ಈ ಸಮಸ್ಸೆಯಿಂದ ಮುಕ್ತಿಸಿಗುತ್ತಿಲ್ಲವಲ್ಲ ಎಂಬುದು ಹೆಚ್ಚಿನ ಜನರಲ್ಲಿ ಗೊಂದಲವನ್ನುಂಟು ಮಾಡಿದೆ. ಈ ಬಿಳಿಸೆರಗಿನಿಂದಾಗಿ ಮಹಿಳೆಯರು ಬಹಳ ತೊಂದರೆ ಅನುಭವಿಸುತ್ತಾರೆ, ಇದರಿಂದ ಸೊಂಟ ನೋವು, ಬೆನ್ನು ನೋವು, ನಿಶಕ್ತಿ, ಬೇಗ ಆಯಾಸವಾಗುವುದು, ಸರ್ವ ರೋಗಕ್ಕೂ ಮನೆಯಲ್ಲಿದೆ ಮದ್ದು ಎಂಬಂತೆ ಇದನ್ನ ತಡೆಗಟ್ಟಲು ಸಹ ಮನೆಮದ್ದು ಇದೆ.
* ಏಲಕ್ಕಿ ಬಾಳೆ ಹಣ್ಣಿನ ಜೊತೆಗೆ ಚಕ್ಕೆ ಪುಡಿಯನ್ನ ಸೇರಿಸಿ ಪ್ರತಿ ದಿನ ಸೇವಿಸ ಬೇಕು.
* ಅಕ್ಕಿ ತೊಳೆದ ನೀರನ್ನ ದಿನಕ್ಕೆ ಮೂರೂ ಭಾರಿ ಕುಡಿಯ ಬೇಕು. ( ಉಪ್ಪು ಹಾಕಬೇಡಿ )
* ಬಿಳಿ ದಾಸವಾಳದ ಹೂವಿನ ದಳಗಳನ್ನ ತಿನ್ನಬೇಕು.
* ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಊಟ ಮಾಡುವ ಸಮಯದಲ್ಲಿ ವ್ಯತ್ಯಾಸವಾದರೆ ಬಿಳಿ ಸೆರಗು ಹೆಚ್ಚಾಗಿ ಕಂಡುಬರುತ್ತದೆ.
* ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳನ್ನ ಸೇವಿಸ ಬೇಕು.( ಪಪ್ಪಾಯ, ಕಿವಿ ಹಣ್ಣು,)
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ