ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

Krishnaveni K
ಬುಧವಾರ, 24 ಡಿಸೆಂಬರ್ 2025 (11:26 IST)
ಚಳಿಗಾಲದಲ್ಲಿ ದೇಹದ ಮಾಂಸಖಂಡಗಳು ಸಂಕುಚಿತವಾಗಿರುತ್ತದೆ. ಹೀಗಾಗಿ ಜಿಮ್ ಮಾಡುವವರು ಚಳಿಗಾಲದಲ್ಲಿ ತಪ್ಪದೇ ಈ ಎಚ್ಚರಿಕೆಯನ್ನು ಗಮನಿಸಿ.

ಚಳಿಗಾಲದಲ್ಲಿ ಕೀಲುಗಳು ಮತ್ತು ಮಾಂಸಖಂಡಗಳು ಸ್ಟಿಫ್ ಆಗಿರುತ್ತವೆ.  ಈ ಸಮಯದಲ್ಲಿ ರಕ್ತ ಸಂಚಾರ ಕಡಿಮೆಯಾಗಿರುತ್ತದೆ. ಹೀಗಾಗಿ ಜಿಮ್ ಮಾಡುವವರು ವಿಶೇಷ ಕಾಳಜಿ ವಹಿಸಬೇಕು.

ಚಳಿಗಾಲದಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುವ ಮೊದಲು ವಾರ್ಮ್ ಅಪ್ ಸ್ವಲ್ಪ ಹೆಚ್ಚು ಹೊತ್ತು ಮಾಡಬೇಕು. ಇದರಿಂದ ದೇಹ ಸಡಿಲವಾಗುತ್ತದೆ. ಒಂದು ವೇಳೆ ನೀವು 5 ನಿಮಿಷ ವಾರ್ಮ್ ಅಪ್ ಮಾಡುತ್ತಿದ್ದಲ್ಲಿ 10 ನಿಮಿಷಕ್ಕೆ ಹೆಚ್ಚಿಸಬೇಕು.

ಕೈ ಕಾಲುಗಳನ್ನು ಆಡಿಸುವ ಲೆಗ್ ಸ್ವಿಂಗ್, ಆರ್ಮ್ ಸರ್ಕಲ್ ಗಳನ್ನು ಹೆಚ್ಚು ಹೊತ್ತು ಮಾಡದೇ ಇದ್ದಲ್ಲಿ ಮಾಂಸಖಂಡಗಳಿಗೆ ಪೆಟ್ಟಾಗುವ, ನೋವು ಕಾಣಿಸಿಕೊಳ್ಳುವ ಸಾಧ್ಯತಯಿರುತ್ತದೆ.

ಚಳಿಗಾಲದಲ್ಲಿ ಜಿಮ್ ಮಾಡುವಾಗ ಕಾಟನ್ ಬಟ್ಟೆ ಬದಲು, ನೈಲಾನ್ ಅಥವಾ ಪಾಲಿಸ್ಟರ್ ಬಟ್ಟೆ ಧರಿಸಿ. ಜಿಮ್ ಮಾಡುವ ಮೊದಲು ಮೈ ಬೆಚ್ಚಗಾಗಲು ಬಿಸಿ ನೀರು ಅಥವಾ ಪಾನೀಯ ಸೇವಿಸಿ. ಒಂದು ವೇಳೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಚಳಿಗಾಲದಲ್ಲಿ ಜಿಮ್ ಅವಾಯ್ಡ್ ಮಾಡುವುದೇ ಉತ್ತಮ. ಜಿಮ್ ಮಾಡಿದ ಬಳಿಕ 5.10 ನಿಮಿಷ ಅದೇ ವಾತಾವರಣದಲ್ಲಿ ರಿಲ್ಯಾಕ್ಸ್ ಆಗಿ ಆಮೇಲಷ್ಟೇ ಹೊರಗಿನ ವಾತಾವರಣಕ್ಕೆ ಕಾಲಿಡಿ.


 
 
 
 
 
 
 
 
 
 
 
 
 
 
 

A post shared by Webdunia Kannada (@kannadawebdunia)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ
Show comments