ಚಳಿಗಾಲದಲ್ಲಿ ದೇಹದ ಮಾಂಸಖಂಡಗಳು ಸಂಕುಚಿತವಾಗಿರುತ್ತದೆ. ಹೀಗಾಗಿ ಜಿಮ್ ಮಾಡುವವರು ಚಳಿಗಾಲದಲ್ಲಿ ತಪ್ಪದೇ ಈ ಎಚ್ಚರಿಕೆಯನ್ನು ಗಮನಿಸಿ.
ಚಳಿಗಾಲದಲ್ಲಿ ಕೀಲುಗಳು ಮತ್ತು ಮಾಂಸಖಂಡಗಳು ಸ್ಟಿಫ್ ಆಗಿರುತ್ತವೆ. ಈ ಸಮಯದಲ್ಲಿ ರಕ್ತ ಸಂಚಾರ ಕಡಿಮೆಯಾಗಿರುತ್ತದೆ. ಹೀಗಾಗಿ ಜಿಮ್ ಮಾಡುವವರು ವಿಶೇಷ ಕಾಳಜಿ ವಹಿಸಬೇಕು.
ಚಳಿಗಾಲದಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುವ ಮೊದಲು ವಾರ್ಮ್ ಅಪ್ ಸ್ವಲ್ಪ ಹೆಚ್ಚು ಹೊತ್ತು ಮಾಡಬೇಕು. ಇದರಿಂದ ದೇಹ ಸಡಿಲವಾಗುತ್ತದೆ. ಒಂದು ವೇಳೆ ನೀವು 5 ನಿಮಿಷ ವಾರ್ಮ್ ಅಪ್ ಮಾಡುತ್ತಿದ್ದಲ್ಲಿ 10 ನಿಮಿಷಕ್ಕೆ ಹೆಚ್ಚಿಸಬೇಕು.
ಕೈ ಕಾಲುಗಳನ್ನು ಆಡಿಸುವ ಲೆಗ್ ಸ್ವಿಂಗ್, ಆರ್ಮ್ ಸರ್ಕಲ್ ಗಳನ್ನು ಹೆಚ್ಚು ಹೊತ್ತು ಮಾಡದೇ ಇದ್ದಲ್ಲಿ ಮಾಂಸಖಂಡಗಳಿಗೆ ಪೆಟ್ಟಾಗುವ, ನೋವು ಕಾಣಿಸಿಕೊಳ್ಳುವ ಸಾಧ್ಯತಯಿರುತ್ತದೆ.
ಚಳಿಗಾಲದಲ್ಲಿ ಜಿಮ್ ಮಾಡುವಾಗ ಕಾಟನ್ ಬಟ್ಟೆ ಬದಲು, ನೈಲಾನ್ ಅಥವಾ ಪಾಲಿಸ್ಟರ್ ಬಟ್ಟೆ ಧರಿಸಿ. ಜಿಮ್ ಮಾಡುವ ಮೊದಲು ಮೈ ಬೆಚ್ಚಗಾಗಲು ಬಿಸಿ ನೀರು ಅಥವಾ ಪಾನೀಯ ಸೇವಿಸಿ. ಒಂದು ವೇಳೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಚಳಿಗಾಲದಲ್ಲಿ ಜಿಮ್ ಅವಾಯ್ಡ್ ಮಾಡುವುದೇ ಉತ್ತಮ. ಜಿಮ್ ಮಾಡಿದ ಬಳಿಕ 5.10 ನಿಮಿಷ ಅದೇ ವಾತಾವರಣದಲ್ಲಿ ರಿಲ್ಯಾಕ್ಸ್ ಆಗಿ ಆಮೇಲಷ್ಟೇ ಹೊರಗಿನ ವಾತಾವರಣಕ್ಕೆ ಕಾಲಿಡಿ.