Select Your Language

Notifications

webdunia
webdunia
webdunia
webdunia

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಿಸುತ್ತೆ ಈ ಟೀ

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಿಸುತ್ತೆ ಈ ಟೀ
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (06:41 IST)
ಬೆಂಗಳೂರು : ಮಕ್ಕಳ ಜ್ಞಾಪಕ ಶಕ್ತಿ ಉತ್ತಮವಾಗಿದ್ದರೆ ಅವರು ಶಾಲೆಯಲ್ಲಿ ಕಲಿಯುವುದರಲ್ಲಿ ಮುಂದಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಜ್ಞಾಪಕ ಶಕ್ತಿ ಕಡಿಮೆ ಇರುವುದರಿಂದ ಅವರು ಎಷ್ಟೇ ಓದಿದರೂ, ಯಾವ ಕೆಲಸ ಮಾಡಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಅಂತವರು ತಮ್ಮ ಮಕ್ಕಳಿಗೆ ಈ ಟೀ ಮಾಡಿ ಕುಡಿಸಿ. ಇದರಿಂದ ಅವರ ನೆನಪಿನ ಶಕ್ತಿ ಅಭಿವೃದ್ಧಿಯಾಗುತ್ತದೆ.


ಒಂದೆಲಗ(ಬ್ರಾಹ್ಮಿ) ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಯನ್ನು 1ಟೀ ಚಮಚ ತೆಗೆದುಕೊಂಡು ಅದನ್ನು 200ml ನಷ್ಟು ನೀರಿಗೆ ಹಾಕಿ  ಚೆನ್ನಾಗಿ ಕುದಿಸಿ. ಆ ನೀರು 100 ml ಆಗುವಷ್ಟು ಕುದಿಸಿ ನಂತರ ಅದಕ್ಕೆ 1 ಗ್ಲಾಸ್ ಹಾಲು ಹಾಗೂ ಕಲ್ಲುಸಕ್ಕರೆ ಹಾಕಿ  ಚೆನ್ನಾಗಿ ಮಿಕ್ಸ್ ಮಾಡಿ  ಸೋಸಿ ಕುಡಿಯಿರಿ. (ಹಾಲು ಬೇಕಾದಲ್ಲಿ ಮಾತ್ರ ಉಪಯೋಗಿಸಿ)
ಹೀಗೆ ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಡಿಸಿರಿ. ಇದರಿಂದ ನಿಮ್ಮ ಮಕ್ಕಳಿಗೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ. 40 ದಿನದಲ್ಲೇ ನಿಮ್ಮ ಮಕ್ಕಳ ಜ್ಷಾಪಕ ಶಕ್ತಿ ವೃದ್ಧಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ , ಪಾದ ಪದೇ ಪದೇ ಬೆವರುತ್ತಿದ್ದರೆ ಈ ಮನೆಮದ್ದನ್ನು ಬಳಸಿ