Publish Date: Tue, 26 Feb 2019 (09:56 IST)
Updated Date: Tue, 26 Feb 2019 (09:59 IST)
ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಕೊನೆಗೂ ಲಯ ಕಂಡುಕೊಂಡ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅರ್ಧಶತಕ ಗಳಿಸಿ ಟೀಕಾಕಾರರ ಬಾಯಿ ಸದ್ಯಕ್ಕೆ ಬಂದ್ ಮಾಡಿದ್ದಾರೆ.
ಇದಕ್ಕೂ ಮೊದಲು ಕ್ರಿಕೆಟ್ ನಿಂದ ಕಳಪೆ ಫಾರ್ಮ್ ಜತೆಗೆ, ನಿಷೇಧ ಶಿಕ್ಷೆಗೊಳಗಾಗಿದ್ದ ರಾಹುಲ್, ನಂತರ ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿ ಭಾರತ ಎ ತಂಡದ ಪರ ಆಡಿದ್ದರು.
ಇದಾದ ಬಳಿಕ ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಂಡ ರಾಹುಲ್ ಮೊನ್ನೆಯ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದರು. ರಾಹುಲ್ ಮರಳಿ ಫಾರ್ಮ್ ಗೆ ಬಂದಿದ್ದು ನೋಡಿ ಹೆಚ್ಚು ಖುಷಿಪಟ್ಟಿದ್ದು ನಾಯಕ ವಿರಾಟ್ ಕೊಹ್ಲಿ.
ಸದಾ ರಾಹುಲ್ ಗೆ ಕೊಹ್ಲಿ ಬೆಂಬಲಿಸುತ್ತಾರೆ ಎಂದು ಅಭಿಮಾನಿಗಳು ಟೀಕಿಸುತ್ತಲೇ ಇರುತ್ತಾರೆ. ಈಗ ರಾಹುಲ್ ಫಾರ್ಮ್ ಗೆ ಮರಳಿರುವುದರಿಂದ ಸಂತಸಗೊಂಡಿರುವ ಕೊಹ್ಲಿ ರಾಹುಲ್ ನಿಜವಾಗಿಯೂ ಚೆನ್ನಾಗಿ ಆಡಿದರು. ನಾವಿಬ್ಬರೂ ಇನ್ನೂ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿದ್ದರೆ ಪಂದ್ಯದ ಸ್ಥಿತಿ ಬೇರೆಯದೇ ಆಗಿರುತ್ತಿತ್ತು. ರಾಹುಲ್ ಮತ್ತು ರಿಷಬ್ ಪಂತ್ ಗೆ ವಿಶ್ವಕಪ್ ಗೂ ಮೊದಲು ಇನ್ನೂ ಹೆಚ್ಚು ಅವಕಾಶ ನೀಡಲು ಬಯಸುತ್ತೇವೆ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.