Publish Date: Tue, 26 Feb 2019 (09:53 IST)
Updated Date: Tue, 26 Feb 2019 (09:54 IST)
ಮುಂಬೈ: ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಬ್ಯಾಟಿಂಗ್ ನೋಡಿ ಮತ್ತೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಧೋನಿ ಅಜೇಯವಾಗಿ 29 ರನ್ ಗಳಿಸಿದರೂ, ಅದಕ್ಕಾಗಿ 37 ಎಸೆತ ಎದುರಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್ ನೋಡಿ ಅಭಿಮಾನಿಗಳು, ಸಾಕಿನ್ನು ನಿವೃತ್ತಿಯಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧೋನಿ ಕ್ರಿಕೆಟ್ ಆಡಿದ್ದು ಸಾಕು, ಇನ್ನು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಕುಳಿತು ನಿವೃತ್ತರಂತೆ ರಾಜಕೀಯ ಮಾತನಾಡುತ್ತಾ ಕೂರಲಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಇನ್ನು ಕೆಲವರು ಧೋನಿ ಬೌಂಡರಿ ಗಳಿಸುವುದನ್ನು ನೋಡಲು ಕಾಯುತ್ತಾ ನಮಗೆ ವಯಸ್ಸಾಗುತ್ತದೆ ಎಂದು ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ದಯವಿಟ್ಟು ನಿವೃತ್ತರಾಗಿ, ನಿಮ್ಮನ್ನು ವಿಶ್ವಕಪ್ ನಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂದೂ ಕೆಲವರು ನಿಷ್ಠುರವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Tue, 26 Feb 2019 (09:53 IST)
Updated Date: Tue, 26 Feb 2019 (09:54 IST)