Publish Date: Mon, 25 Feb 2019 (09:19 IST)
Updated Date: Mon, 25 Feb 2019 (09:20 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಇದೀಗ ತಮಗೆ ಪಾಠ ಮಾಡಿದ ಧೋನಿಗೇ ಸವಾಲು ಹಾಕಿದ್ದಾರೆ!
ಟೀಂ ಇಂಡಿಯಾಕ್ಕೆ ಸೇರಿಕೊಂಡ ನಂತರ ವಿಕೆಟ್ ಕೀಪಿಂಗ್ ಬಗ್ಗೆ ಧೋನಿಯಿಂದ ಹಲವು ಸಲಹೆ ಪಡೆದಿದ್ದ ರಿಷಬ್ ಪಂತ್ ಈಗ ಐಪಿಎಲ್ ನಲ್ಲಿ ಎದುರಾಳಿಗಳಾಗುತ್ತಿದ್ದಾರೆ. ಹೀಗಾಗಿ ಐಪಿಎಲ್ ಗೆ ಮೊದಲು ಧೋನಿಗೇ ಟೀಸ್ ಮಾಡಿದ್ದಲ್ಲದೇ ಸವಾಲು ಕೂಡಾ ಹಾಕಿದ್ದಾರೆ.
ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ರಿಷಬ್ ‘ಧೋನಿ ಬಾಯಿ ನೋಡಿ ಎಲ್ಲರೂ ನಿಮ್ಮಿಂದ ಕಲಿತುಕೊಂಡರು, ಈಗ ನಿಮ್ಮ ಎದುರೇ ಅದನ್ನು ತೋರಿಸಿಕೊಡಲೇಬೇಕು. ಐಪಿಎಲ್ ನಲ್ಲಿ ಸಿಗೋಣ. ಏನು ಹೇಳ್ತೀರಿ?’ ಎಂದು ಧೋನಿ ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ