Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಗರ್ಭಿಣಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಚಿಕ್ಕಪ್ಪ

ಆಸ್ತಿಗಾಗಿ ಗರ್ಭಿಣಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಚಿಕ್ಕಪ್ಪ
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (06:26 IST)
ಬೆಂಗಳೂರು : ಆಸ್ತಿ ವಿಚಾರಕ್ಕೆ 2 ತಿಂಗಳ ಗರ್ಭಿಣಿ ಮೇಲೆ ಆಕೆಯ ಚಿಕ್ಕಪ್ಪ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಹೆಚ್‌.ಎ.ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ರೂಪಾ ಹಲ್ಲೆಗೆ ಒಳಗಾದ ಗರ್ಭಿಣಿ. ರೂಪಾ ಅವರ ತಂದೆ ಮತ್ತು ಚಿಕ್ಕಪ್ಪ ಆಸ್ತಿಯನ್ನು ಹಂಚಿಕೆ ಮಾಡಿಕೊಂಡಿದ್ದರು. ಅಣ್ಣನ ಆಸ್ತಿಯಲ್ಲಿ ಸ್ವಲ್ಪಭಾಗವನ್ನು ಪಡೆದುಕೊಂಡಿದ್ದ ಚಿಕ್ಕಪ್ಪ ಉಳಿದ ಜಾಗದಲ್ಲಿ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ಆದರೆ, 5 ವರ್ಷಗಳಾದರೂ ಮನೆ ಕಟ್ಟಿ ಕೊಡದ ಕಾರಣ ರೂಪಾ ಮತ್ತು ಅವರ ತಾಯಿ ಕೇಳಲು ಹೋಗಿದ್ದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿ ಕೋಪದಿಂದ ಚಿಕ್ಕಪ್ಪ ರೂಪಾ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.


ರೂಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಸತ್ತಿದೆ ಎಂದು ಪತ್ನಿಗೆ ಸುಳ್ಳು ಹೇಳಿದ ಪತಿ ಬಳಿಕ ಮಗುವನ್ನು ಮಾಡಿದ್ದೇನು ಗೊತ್ತಾ?