Select Your Language

Notifications

webdunia
webdunia
webdunia
webdunia

ನೀವು ಮಾಡುವ ಪೂಜೆ ದೇವರಿಗೆ ಮೆಚ್ಚುಗೆ ಆಗಿದ್ದೇಯೇ ಎಂಬುದನ್ನು ತಿಳಿಸುತ್ತೇ ಈ ಸಂಕೇತಗಳು

ನೀವು ಮಾಡುವ ಪೂಜೆ ದೇವರಿಗೆ ಮೆಚ್ಚುಗೆ ಆಗಿದ್ದೇಯೇ ಎಂಬುದನ್ನು ತಿಳಿಸುತ್ತೇ ಈ ಸಂಕೇತಗಳು
ಬೆಂಗಳೂರು , ಮಂಗಳವಾರ, 26 ಫೆಬ್ರವರಿ 2019 (06:54 IST)
ಬೆಂಗಳೂರು : ದೇವರ ಕೃಪೆ ಸದಾ ತಮ್ಮ ಮೇಲೆ ಇರಲಿ ಎಂದು ಎಲ್ಲಾ ಮನೆಗಳಲ್ಲಿ  ಪ್ರತಿದಿನ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ನೀವು ಮಾಡಿದ ಪೂಜೆಯನ್ನು ದೇವರು ಮೆಚ್ಚಿ ನಿಮ್ಮ ಮೇಲೆ ಕರುಣೆ ತೋರಿದ್ದಾನೆ  ಎಂಬುದನ್ನು ತಿಳಿಯಲು ಪೂಜೆಯ ವೇಳೆ ಈ ಸಂಕೇತಗಳನ್ನು ನೀಡುತ್ತಾನೆ.


ಹೌದು. ಪೂಜೆ ಮಾಡುವ ವೇಳೆ ಅಗರಬತ್ತಿ ಹೊಗೆ ಮನೆಯಲ್ಲೆ ತುಂಬಿದ್ರೆ, ಸಕಾರಾತ್ಮಕ ಶಕ್ತಿ ನಿಮ್ಮ ಮನಸ್ಸಿನಲ್ಲಿ ಮೂಡಿದ್ರೆ ಕೆಲವೇ ದಿನಗಳಲ್ಲಿ ಅದೃಷ್ಟ ನಿಮ್ಮ ಕೈಹಿಡಿಯುತ್ತವೆ ಎಂದರ್ಥ. ಪೂಜೆ ಮಾಡುವ ವೇಳೆ ಮುಖ್ಯ ದ್ವಾರದ ಮುಂದೆ ಭಿಕ್ಷುಕ ಬಂದ್ರೆ ಸ್ವತಃ ಭಗವಂತ ಬಂದಿದ್ದಾನೆ ಎಂದರ್ಥೈಸಿಕೊಳ್ಳಿ. ನಿಮ್ಮ ಕೈನಲ್ಲಾದಷ್ಟು ಹಣವನ್ನು ದಾನ ಮಾಡಿ.


ಪೂಜೆ ಮಾಡುವ ವೇಳೆ ದೀಪದ ಬೆಳಕು ಏಕಾಏಕಿ ದೊಡ್ಡದಾದ್ರೆ ಇದು ಶುಭ ಸಂಕೇತ. ಒಂದು ವೇಳೆ ಅಗರಬತ್ತಿ ಹೊಗೆಯಲ್ಲಿ ‘ಓಂ’ ಚಿತ್ರ ಮೂಡಿದ್ರೆ ಇದು ಕೂಡ ಭಗವಂತ ನಿಮ್ಮ ಮೇಲೆ ಕೃಪೆ ತೋರಿದ್ದಾನೆ ಎಂದರ್ಥ. ದೇವರ ಪೂಜೆ ಮಾಡುವ ವೇಳೆ ಹೂಗಳನ್ನು ದೇವರ ಮೇಲೆ ಹಾಕ್ತೇವೆ. ಪೂಜೆ ಮಾಡುತ್ತಿದ್ದ ವೇಳೆ ಹೂ ನಿಮ್ಮ ಕಡೆ ಬಿದ್ರೆ ನಿಮ್ಮ ಮೇಲೆ ಭಗವಂತ ಕರುಣೆ ತೋರಿದ್ದಾನೆ ಎಂದರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಡೇ ಸಾತ್, ಶನಿಪ್ರಭಾವ ಕಡಿಮೆಯಾಗಲು ಶನಿವಾರ ಹೀಗೆ ಮಾಡಿದರೆ ಸಾಕು