Select Your Language

Notifications

webdunia
webdunia
webdunia
webdunia

ಸಾಡೇ ಸಾತ್, ಶನಿಪ್ರಭಾವ ಕಡಿಮೆಯಾಗಲು ಶನಿವಾರ ಹೀಗೆ ಮಾಡಿದರೆ ಸಾಕು

ಸಾಡೇ ಸಾತ್, ಶನಿಪ್ರಭಾವ ಕಡಿಮೆಯಾಗಲು ಶನಿವಾರ ಹೀಗೆ ಮಾಡಿದರೆ ಸಾಕು
ಬೆಂಗಳೂರು , ಸೋಮವಾರ, 25 ಫೆಬ್ರವರಿ 2019 (09:08 IST)
ಬೆಂಗಳೂರು: ಸಾಡೇ ಸಾತ್ ಶನಿಪ್ರಭಾವದಿಂದ ಕೈ ಹಿಡಿದ ಕಾರ್ಯಗಳು ನೆರವೇರುತ್ತಿಲ್ಲ, ಜೀವನದಲ್ಲಿ ಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಶನಿವಾರಗಳಂದು ಈ ಪೂಜೆಗಳನ್ನು ಮಾಡಿದರೆ ಸಾಕು.


ಶನಿವಾರ ಶನಿ ಮತ್ತು ಈಶ್ವರ ಪೂಜೆ ಮಾಡುವುದರಿಂದ ಇಬ್ಬರ ಅನುಗ್ರಹ ನಮ್ಮ ಮೇಲಿರುತ್ತದೆ. ಇದರಿಂದ ಶನಿ ಪ್ರಭಾವ ಕಡಿಮೆಯಾಗಿ ನಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಅದಕ್ಕಾಗಿ ಶನಿವಾರಗಳಂದು ಪ್ರದೋಷದ ಸಮಯದಲ್ಲಿ ಈ ಕೆಳಗಿನ ಕೆಲವು ಪೂಜೆಗಳನ್ನು ಮಾಡಿದರೆ ಉತ್ತಮ.

  • ಶಿವ ಅಷ್ಟೋತ್ತರ ಸಮೇತ ಹಾಲಿನ ಅರ್ಚನೆ
  • ಹಾಲಿನ ಅಭಿಷೇಕ
  • ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ ಪಠಣ
  • ಶಿವನ ದೇವಾಲಯದಲ್ಲಿ ದೀಪ ಹಚ್ಚುವುದು
ಪ್ರದೋಷದ ಅಭಿಷೇಕ ವಸ್ತುಗಳು ಮತ್ತು ಅದರ ಫಲಗಳು
  • ಪಂಚಗವ್ಯ- ಪಾಪಗಳಿಂದ ಮುಕ್ತಿ
  • ಪಂಚಾಮೃತ- ಸಂಪತ್ತು ವೃದ್ಧಿ
  • ತುಪ್ಪ-ಮೋಕ್ಷ
  • ಹಾಲು-ದೀರ್ಘಾಯುಷ್ಯ
  • ಮೊಸರು-ಮಕ್ಕಳ ಭಾಗ್ಯ
  • ಜೇನು ತುಪ್ಪ-ಉತ್ತಮ ಧ್ವನಿ
  • ಅಕ್ಕಿ ಪುಡಿ- ಸಾಲದಿಂದ ಮುಕ್ತಿ
  • ಕಬ್ಬಿನ ರಸ-ಆರೋಗ್ಯ ಭಾಗ್ಯ
  • ನಿಂಬೆ ರಸ-ಸಂತೋಷ
  • ಗಂಧ-ಲಕ್ಷ್ಮೀ ಕಟಾಕ್ಷ
  • ಸಕ್ಕರೆ- ಶತ್ರು ನಾಶ
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಿಥುನ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?